ಕರ್ನಾಟಕ

karnataka

ETV Bharat / state

ಸೂರ್ಯಗ್ರಹಣ ವೀಕ್ಷಣೆ: ವಿಜ್ಞಾನಿಗಳು, ವಿದ್ಯಾರ್ಥಿಗಳಿಂದ ಕುತೂಹಲದ ವೀಕ್ಷಣೆ

ಇಂದು ಕಂಕಣ ಸೂರ್ಯಗ್ರಹಣ ಕಾಣಿಸುತ್ತಿದ್ದು, ಇದರ ವೀಕ್ಷಣೆಗೆ ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗು ವಿಜ್ಞಾನಿಗಳು ಕಾತರತೆಯಿಂದ ಗ್ರಹಣ ವೀಕ್ಷಣೆಗೆ ಕಾಯುತ್ತಿದ್ದಾರೆ.

By

Published : Dec 26, 2019, 8:57 AM IST

solar eclipse
ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯ

ಬೆಂಗಳೂರು: ನಗರದ ಜವಹರಲಾಲ್ ನೆಹರು ತಾರಾಲಯದಲ್ಲಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಿಸುತ್ತಿದ್ದಾರೆ. ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಗ್ರಹಣವನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ವೆಲ್ಡರ್ಸ್ ಗ್ಲಾಸ್, ಟೆಲಿಸ್ಕೋಪ್​ನ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಸೂರ್ಯಗ್ರಹಣ ಬೆಳಗ್ಗೆ 8.04 ನಿಮಿಷಕ್ಕೆ ಆರಂಭವಾಗಿ, 9.29 ಕ್ಕೆ ಸಂಪೂರ್ಣ ಗ್ರಹಣ ಗೋಚರವಾಗಿ, 11:11 ಕ್ಕೆ ಗ್ರಹಣ ಮುಗಿಯಲಿದೆ. ಸಂಪೂರ್ಣ ಕಂಕಣ ಗ್ರಹಣ 2 ರಿಂದ 2:20 ನಿಮಿಷದವರೆಗೆ ಗೋಚರಿಸಲಿದೆ. ಈ ಬಾರಿ ಭೂಮಿ ಹಾಗೂ ಚಂದ್ರನ ನಡುವೆ ಅಂತರ ಹೆಚ್ಚಿಗೆ ಇರುವುದರಿಂದ ಸೂರ್ಯನನ್ನ ಚಂದ್ರ ಸಂಪೂರ್ಣವಾಗಿ ಮುಚ್ಚುಲು ಸಾಧ್ಯವಿಲ್ಲ ಎನ್ನಲಾಗ್ತಿದೆ.

ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯ

ಚಂದ್ರ ಅಡ್ಡ ಬಂದರೂ ಸಹ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬಳೆಯ ಆಕಾರದಲ್ಲಿ ಸೂರ್ಯ ಗೋಚರ ಆಗಲಿದ್ದಾನೆ. 9 ವರ್ಷಗಳ ಬಳಿಕ ಸಂಭವಿಸುತ್ತಿರೋ ಕಂಕಣ ಸೂರ್ಯ ಗ್ರಹಣ ಇದಾಗಿದ್ದು, ಇದನ್ನು ವಿಜ್ಞಾನಿಗಳು ಹಾಗೂ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ತಾರಾಲಯದಲ್ಲಿ ಸಾರ್ವಜನಿಕರಿಗಾಗಿ 5 ಟೆಲಿಸ್ಕೋಪ್ ವ್ಯವಸ್ಥೆ ಕಲ್ಪಿಸಲಾಗಿದೆ.

ABOUT THE AUTHOR

...view details