ಬೆಂಗಳೂರು: ಕೊರೊನಾ ತೀವ್ರತೆ ಕಡಿಮೆ ಆದ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಇಟ್ಟಿರುವ ಸರ್ಕಾರ ಇಂದಿನಿಂದ ಪ್ರಾಥಮಿಕ ತರಗತಿಯನ್ನ ಆರಂಭಿಸಿದೆ. ಈ ಹಿಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಭೌತಿಕವಾಗಿ 6-10 ನೇ ತರಗತಿ ಪ್ರಾರಂಭಿಸಲಾಗಿತ್ತು. ಇದೀಗ 1-5 ನೇ ತರಗತಿ ಆರಂಭಿಸಿದ್ದು, ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ವಿದ್ಯಾರ್ಥಿಗಳು ಶಾಲಾ ಬಾಗಿಲು ತಟ್ಟಿದ್ದಾರೆ.
ಕಳೆದ ಆಗಸ್ಟ್ 23ರಂದು ಹೈಸ್ಕೂಲ್ ಹಾಗೂ ಪಿಯು ಕಾಲೇಜು ಆರಂಭಗೊಂಡಿದ್ದವು. ಬಳಿಕ 2ನೇ ಹಂತವಾಗಿ ಪ್ರಾಥಮಿಕ ತರಗತಿಯಾದ 6, 7 ಹಾಗೂ 8ನೇ ಭೌತಿಕ ತರಗತಿ ಆರಂಭವಾಗಿತ್ತು. ಇದೀಗ 1-5ನೇ ತರಗತಿ ಶುರುವಾಗಿದ್ದು, ಆನ್ಲೈನ್ ಹಾಗೂ ಆಫ್ಲೈನ್ ಎರಡಕ್ಕೂ ಅವಕಾಶ ನೀಡಲಾಗಿದೆ. ಕೊರೊನಾ ಹಿನ್ನೆಲೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 50 ರಷ್ಟು ಹಾಜರಾತಿ ಅವಕಾಶ ಕಲ್ಪಿಸಲಾಗಿದೆ.