ಕರ್ನಾಟಕ

karnataka

ETV Bharat / state

ಪೋಷಕರು ಪಕ್ಕದ ಮನೆಗೆ ಹೋಗಿ ಬರುವಷ್ಟರಲ್ಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! - ಬೆಂಗಳೂರು ಅಪರಾಧ ಸುದ್ದಿ

ಪೋಷಕರು ಪಕ್ಕದ ಮನೆಗೆ ಹೋಗಿ ಬರುವಷ್ಟರಲ್ಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

School girl committed suicide in Bangalore, Bangalore crime news, Bengaluru girl suicide news, ಶಾಲಾ ವಿದ್ಯರ್ಥಿನಿ ಆತ್ಮಹತ್ಯೆಗೆ ಶರಣು, ಬೆಂಗಳೂರಿನಲ್ಲಿ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಶರಣು, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಬಾಲಕಿ ಆತ್ಮಹತ್ಯೆ ಸುದ್ದಿ,
ನೇಣು ಬಿಗಿದುಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

By

Published : Jan 24, 2022, 7:51 AM IST

ಬೆಂಗಳೂರು:ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ತಮ್ಮ ಪೋಷಕರು ಪಕ್ಕದ ಮನೆಗೆ ಹೋಗಿ ಬರುವಷ್ಟರಲ್ಲೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಚೆಲುವಪ್ಪಗಾರ್ಡನ್ ನಿವಾಸಿ ರಾಜು ಮತ್ತು ಜಯಂತಿ ಅವರ ದ್ವೀತಿಯ ಪುತ್ರಿ ಪೂಜಾ(16) ಮೃತ ವಿದ್ಯಾರ್ಥಿನಿ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಓದಿ:ಉತ್ಸವ ಮೂರ್ತಿಯಾಗಿರಲು ತಯಾರಿಲ್ಲ... ಅಧ್ಯಕ್ಷೀಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸರ್ಕಿಸಿಯನ್

ಪ್ರಕರಣದ ವಿವರ:ರಾಜು ಭದ್ರತಾ ಸಿಬ್ಬಂದಿ ಮತ್ತು ಪೇಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಪತ್ನಿ ಜಯಂತಿ ಮನೆಯಲ್ಲಿಯೇ ಟೈಲರಿಂಗ್ ಕೆಲಸ ಮಾಡುತ್ತಲೇ ಗಂಡನಿಗೆ ಆಸರೆಯಾಗಿದ್ದಾರೆ. ದಂಪತಿಗೆ ಮೂವರು ಹೆಣ್ಣು ಮಕ್ಕಳು. ಈ ಪೈಕಿ ದ್ವಿತೀಯ ಪುತ್ರಿ ಪೂಜಾ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು.

ರಾಜು ದಂಪತಿ ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಮನೆ ಸಮೀಪದ ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ವಾಪಸ್ ಬಂದಾಗ ಪೂಜಾ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details