ಬೆಂಗಳೂರು: ಕೋವಿಡ್ ಕಾರಣಕ್ಕೆ ಲಾಕ್ ಆಗಿದ್ದ, ಕಾಲೇಜುಗಳು 10 ತಿಂಗಳ ಬಳಿಕ ಇದೀಗ ಆರಂಭವಾಗಿದೆ. ಹೊಸ ವರ್ಷಕ್ಕೆ ಹೊಸ ತರಗತಿಗಳು ಶುರುವಾಗಿದ್ದು, ಮೊದಲ ದಿನವೇ ಕಾಲೇಜಿನಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಇಂದಿನಿಂದ ತರಗತಿ ಆರಂಭಿಸಲು ಸರ್ಕಾರ ಆದೇಶ ನೀಡಿದೆ. ಉಪನ್ಯಾಸಕರು, ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಇರುವ ಕಾರಣ, ಇಂದಿನಿಂದ ಹಾಜರಾಗಲು ನಿರ್ಧಾರ ಮಾಡಲಾಗಿದೆ. ಮಹಾರಾಣಿ ಅಮ್ಮಣ್ಣಿ ಕಾಲೇಜು, ಎಂಇಎಸ್ ಕಾಲೇಜು ಸೇರಿ ವಿವಿಧ ಕಾಲೇಜುಗಳು ಶುರುವಾಗಲಿವೆ.
ಇಂದಿನಿಂದ ಶಾಲಾ - ಕಾಲೇಜು ಆರಂಭ ಇನ್ನು ನಗರದ ಶೇಷಾದ್ರಿಪುರಂ ಕಾಲೇಜು 9 ಗಂಟೆಗೆ ಆರಂಭವಾಗಿದ್ದು, ಕಾಲೇಜಿಗೆ ಉಪನ್ಯಾಸಕರು, ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸೋಷಿಯಲ್ ಡಿಸ್ಟೆನ್ಸ್, ಮಾಸ್ಕ್, ಬರುವ ಎಲ್ಲರಿಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ.
ಓದಿ : ಇಂದಿನಿಂದ ಶಾಲಾ- ಕಾಲೇಜು ಆರಂಭ... ಹೇಗೆಲ್ಲ ಇದೆ ಸಿದ್ಧತೆ!
ಈ ಬಗ್ಗೆ ಕಾಲೇಜು ವಿದ್ಯಾರ್ಥಿ ಕೀರ್ತಿ ಮಾತನಾಡಿದ್ದು, 10 ತಿಂಗಳ ಬಳಿಕ ಮೊದಲ ದಿನ ಕಾಲೇಜಿಗೆ ಬಂದಿರುವುದು ಖುಷಿ ಕೊಟ್ಟಿದೆ. ದ್ವಿತೀಯ ಪಿಯು ಎಕ್ಸಾಂ ಇದ್ದು, ಆನ್ ಲೈನ್ ಕ್ಲಾಸ್ ಎಫೆಕ್ಟಿವ್ ಅನ್ನಿಸಿಲ್ಲ. ನಮ್ಮ ತಂದೆ ತಾಯಿಯೇ ಆನ್ ಲೈನ್ ಕ್ಲಾಸ್ ಬೇಡ, ಕಾಲೇಜಿಗೆ ಹೋಗು ಎಂದಿದ್ದಾರೆ ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿದರು.