ಕರ್ನಾಟಕ

karnataka

ETV Bharat / state

ಪ್ರಚೋದನೆ ನೀಡುವ ಹೇಳಿಕೆ ಬಿಟ್ಟು ರೈತರಿಗೆ ನೆರವಾಗಿ: ಶೋಭಾಗೆ ಸಚಿನ್​​ ಮಿಗಾ ಟಾಂಗ್​​ - ಸಚಿನ್​ ಮಿಗಾ

ರಾಜ್ಯದ ರೈತರ ಸಾಲ ಮನ್ನಾ ಆಗಿಲ್ಲವೆಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

ಶೋಭಾಗೆ ಟಾಂಗ್​ ಕೊಟ್ಟ ಸಚಿನ್​ ಮಿಗಾ

By

Published : Jun 15, 2019, 4:55 PM IST

Updated : Jun 15, 2019, 11:05 PM IST

ಬೆಂಗಳೂರು:ರಾಜ್ಯದ ರೈತರ ಸಾಲ ಮನ್ನಾ ಆಗಿಲ್ಲವೆಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಸಂಘದ ಅಧ್ಯಕ್ಷ ಸಚಿನ್ ಮಿಗಾ, ಸ್ವಲ್ಪ ಬಿಡುವು ಮಾಡಿಕೊಂಡು ಬ್ಯಾಂಕ್ ಬಳಿ ಹೋದರೆ ಹಾಗೂ ಮಾಹಿತಿ ಹಕ್ಕಿನ ಅಡಿ ಅರ್ಜಿಯನ್ನು ಸಲ್ಲಿಸಿದರೆ ರೈತರಿಗೆ ಎಷ್ಟು ಮೊತ್ತ ಪಾವತಿಯಾಗಿದೆ ಎಂದು ತಿಳಿಯುತ್ತದೆ ಎಂದಿದ್ದಾರೆ

ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಬರೆದ ಪತ್ರ

ಅಲ್ಲದೆ ಕರಾವಳಿ, ಮಲೆನಾಡು ಭಾಗದಲ್ಲಿ ಸತ್ತ ಹೆಣಗಳ ಮೇಲೆ ಕೋಮು ಸಂಘರ್ಷಕ್ಕೆ ಭಾವನಾತ್ಮಕ ಪ್ರಚೋದನೆ ಮಾಡುವ ನೀವು, ರೈತರ ವಿಚಾರದಲ್ಲಿ ಶೋ ಕೊಡಬೇಡಿ ಎಂದಿದ್ದಾರೆ. ನೀವು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಉದಾಹರಣೆಗಳೇ ಇಲ್ಲ. ಇನ್ನಾದರು ಇಂತಹ ಪ್ರಚೋದನೆ ನೀಡುವ ಹೇಳಿಕೆ ಬಿಟ್ಟು ರೈತರಿಗೆ ನೆರವಾಗಿ ಎಂದು ಸಲಹೆ ಇತ್ತಿದ್ದಾರೆ.

Last Updated : Jun 15, 2019, 11:05 PM IST

ABOUT THE AUTHOR

...view details