ಕರ್ನಾಟಕ

karnataka

ETV Bharat / state

75 ಯೂನಿಟ್ ಉಚಿತ ವಿದ್ಯುತ್ ವಿತರಣೆಯ ಯೋಜನೆಯನ್ನು ಹಿಂಪಡೆದಿಲ್ಲ: ಸಿಎಂ - Chief Minister Basavaraja Bommai news

ಬಡವರಿಗೆ ಮತ್ತು ದುಡಿಯುವ ವರ್ಗದ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ಇದರ ಲಾಭವನ್ನು ಪಡೆದುಕೊಳ್ಳಬೇಕು. ಅಲ್ಲದೇ ಎಸ್​​ಸಿ ಮತ್ತು ಎಸ್ಟಿಯವರಿಗೆ ಉಚಿತವಾಗಿ 75 ಯೂನಿಟ್ ಉಚಿತ ವಿದ್ಯುತ್ ವಿತರಣೆ ಯೋಜನೆಯನ್ನು ಹಿಂಪಡೆದಿಲ್ಲ ಎಂದು ಸಿಎಂ ಹೇಳಿದರು.

CM
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

By

Published : Sep 18, 2022, 5:38 PM IST

ಬೆಂಗಳೂರು: ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ವಿತರಣೆಯ ಯೋಜನೆಯನ್ನು ಹಿಂಪಡೆದಿಲ್ಲ. ಇನ್ನಷ್ಟು ಸರಳೀಕರಣ ಮಾಡಿ, ಇದೇ ತಿಂಗಳಿನಿಂದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಪರಿಶ್ರಮದಿಂದ ದುಡಿಯುವ ವರ್ಗ: ಇಂದು ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಸ್ಮಾ ದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ 43ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಿಎಂ ಪಾಲ್ಗೊಂಡರು. ಬಳಿಕ ಮಾತನಾಡಿದ ಅವರು, ಬಿಸಿಲು, ಗಾಳಿ, ಮಳೆ ಎನ್ನದೇ ಬಹಳ ಕಠಿಣ ಪರಿಶ್ರಮದಿಂದ ದುಡಿಯುವುದು ಈ ಭೋವಿ ಸಮಾಜದ ಮೂಲ ಗುಣ. ಭೋವಿ ಸಮಾಜದೊಂದಿಗೆ ನಮ್ಮದು‌ 30 ವರ್ಷದ ಸಂಬಂಧವಿದೆ.‌ ನಮ್ಮ ತಂದೆಯವರೊಂದಿಗೆ ಈ ಸಮಾಜ ಅನೋನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಜಿ.ಎಸ್ ಬಿಳಗಿಯವರು, ಶಿವಮೊಗ್ಗದಲ್ಲಿ ಜಿ ಬಸವಣ್ಣಪ್ಪ ಮಂತ್ರಿಯಾಗಿದ್ದರು. ಇವರು ನಮ್ಮ ತಂದೆಯವರೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಬೆಂಗಳೂರಿನಲ್ಲಿ ಇಬ್ಬರು ಈ ಸಮಾಜದಿಂದ ಶಾಸಕರಾಗಿರುವುದು ಹೆಮ್ಮೆಯ ವಿಚಾರ. ಅರವಿಂದ ಲಿಂಬಾವಳಿ ಮತ್ತು ರಘು ಅವರು ನಿರಂತರವಾಗಿ ಮೂರು ಬಾರಿ ಗೆದ್ದಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಬೇರೆ ಪಕ್ಷದಲ್ಲಿದ್ದರು ಕೂಡ ನನಗೆ ಬಹಳ ಆತ್ಮೀಯರು ಎಂದು ನುಡಿದರು.

ಸುವರ್ಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ

ದುಡಿಮೆಯೇ ದೊಡ್ಡಪ್ಪ: ಈ ಸಮಾಜದ ಏಳಿಗೆ ಎಂದರೆ ಈ ರಾಜ್ಯದ ಏಳಿಗೆ. ನನ್ನ ಲಕ್ಷ್ಯ, ನನ್ನ ಕಾರ್ಯಕ್ರಮ, ಯೋಜನೆ ನಮ್ಮ ರಾಜ್ಯದ ದುಡಿಯುವ ವರ್ಗಕ್ಕೆ ಮೀಸಲಾಗಿದೆ. ಒಂದು ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು. ‌ಈಗ ಬದಲಾವಣೆ ಆಗಿದೆ. ಈಗ ದುಡಿಮೆಯೇ ದೊಡ್ಡಪ್ಪ. ದುಡಿಮೆಯೇ ಭೋವಿ ಜನಾಂಗದ ಕುಲ ಕಸಬು, ಕುಲ ದೇವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ:ಕಾಲ ಬದಲಾವಣೆ ಆಗಿದೆ. ಎಲ್ಲರೂ ಕುಲ ಕಸುಬನ್ನೇ ಮಾಡಬೇಕು ಅಂತ ಏನಿಲ್ಲ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ, ವಿದ್ಯೆಯನ್ನು ಪಡೆದುಕೊಂಡರೆ ಎಲ್ಲ ರಂಗದಲ್ಲಿಯೂ ಕೂಡ ಮುಂದೆ ಬರಬಹುದು. ಇಲ್ಲಿರುವ ಮಕ್ಕಳು ತೆಗೆದುಕೊಂಡಿರುವ ಅಂಕಗಳನ್ನು ನೋಡಿ ನನಗೆ ಹೆಮ್ಮೆಯಾಯಿತು.

ಸಮಾಜದ ಮಕ್ಕಳಲ್ಲಿ ಬುದ್ಧಿವಂತಿಕೆ, ಜ್ಞಾನದ ಭಂಡಾರವಿದೆ. ಅವರಿಗೆ ಅವಕಾಶ ಕೊಟ್ಟರೆ ಮುಂದೆ ಬರುತ್ತಾರೆ. ಈ ಸಮಾಜ ಐಟಿ-ಬಿಟಿ, ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಮುಂದೆ ಬರಬೇಕು ಎನ್ನುವುದು ನನ್ನ ಅಸೆ. ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು ಎಂದು ನುಡಿದರು.

ಇದನ್ನೂ ಓದಿ:ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ರೈಲ್ವೆ ಮಾರ್ಗ: ಕೇರಳ ಸಿಎಂ ಪ್ರಸ್ತಾಪ ತಿರಸ್ಕರಿಸಿದ ಬೊಮ್ಮಾಯಿ‌

ನಮ್ಮ ಸರ್ಕಾರ ನಿಮ್ಮ ಕಸಬಿಗೆ ಏನೇನು ಕಾನೂನು ಅಡಚಣೆಯಿದೆ. ಅದನ್ನು ದೂರ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಮಕ್ಕಳಿಗೆ ಈಗಾಗಲೇ ವಿದ್ಯಾವೇತನ ನೀಡಲಾಗುತ್ತಿದೆ. ವಸತಿ ನಿಲಯಗಳ ನಿರ್ಮಾಣವಾಗಿದೆ. ಈ ವರ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ 100 ಹೊಸ ವಸತಿ ನಿಲಯಗಳನ್ನು ಮಾಡುತ್ತಿದ್ದೇವೆ. 1000 ಮಕ್ಕಳು ಇರುವಂತಹ 5 ಮೆಗಾ ವಸತಿ ನಿಲಯ ಕೂಡ ನಿರ್ಮಾಣ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಸಮಾಜಕ್ಕೆ ‌ವಿವಿಧ‌ ಯೋಜನೆ:ವಿದೇಶಕ್ಕೆ ತೆರಳುವವರಿಗೆ ಹಣಕಾಸಿನ ನೆರವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಕಲ್ಲು ಒಡೆಯುವವರಿಂದ ಹಿಡಿದು, ಬಡಿಗೇರರು, ಕುಂಬಾರರು, ವಿಶ್ವಕರ್ಮ ಮತ್ತಿತರ ಕುಶಲ ಕರ್ಮಿಗಳೆಲ್ಲರಿಗೂ 50 ಸಾವಿರ ರೂ. ಸಾಲ/ಸಬ್ಸಿಡಿ ಯೋಜನೆ ರೂಪಿಸುತ್ತಿದ್ದೇವೆ. ಬಡವರಿಗೆ ಮತ್ತು ದುಡಿಯುವ ವರ್ಗದ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ABOUT THE AUTHOR

...view details