ಬೆಂಗಳೂರು: ಐಎಂಎ ಪ್ರಕರಣದ ರೀತಿಯಲ್ಲೇ ನಗರದಲ್ಲಿ ಮತ್ತೊಂದು ಹಗರಣ ಬಯಲಾಗಿ ಸುಮಾರು ಒಂದು ವರ್ಷವಾಗಿದೆ. ಆದ್ರೆ ಈ ಪ್ರಕರಣದ ಬಗ್ಗೆ ವಂಚಿತರಿಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ.
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಹಗರಣ ಬಯಲಾಗಿ ಒಂದು ವರ್ಷವಾಗಿದ್ದರೂ, ವಂಚನೆಗೊಳಗಾದವರಿಗೆ ಯಾವುದೇ ಪರಿಹಾರ ಸಿಗದ ಕಾರಣ ಇಂದು ಠೇವಣಿದಾರರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಹಗರಣ ಬೆಳಕಿಗೆ ಬಂದು ಸುಮಾರು ಒಂದು ವರ್ಷ ಕಳೆದರೂ ಆರ್ಬಿಐ ಮಾತ್ರ ಯಾವುದೇ ಮಾಹಿತಿ ನೀಡುತ್ತಿಲ್ಲ. ಇತ್ತ ಸಿಐಡಿ ಅಧಿಕಾರಿಗಳು ಕೂಡ ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.