ಕರ್ನಾಟಕ

karnataka

ETV Bharat / state

SC, ST ನೌಕರರ ಸೈಟ್​​​​ ಗೋಲ್​ಮಾಲ್​​​​ ಆರೋಪ: ನಾಗಮಂಗಲ ಶಾಸಕ ಸುರೇಶ್​ಗೌಡಗೆ ನೋಟಿಸ್​​​​ - KN_bNG_01_19_NAGMANGLA_MLA_7204498_BHAVYA

ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್​ ಸೊಸೈಟಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ನಾಗಮಂಗಲ ಶಾಸಕ ಸುರೇಶ್ ಗೌಡ, ಸೊಸೈಟಿಯ ಅಧ್ಯಕ್ಷರಾಗಿದ್ದ ಎಂ.ಎ.ಗೋಪಾಲ ಸ್ವಾಮಿ, ಎಂ.ಸಂತೋಷ್, ಕಾರ್ಯನಿರ್ವಾಹಕ ನಿರ್ದೇಶಕ ಬಿ.ಹೆಚ್.ಬಾಲಾಜಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನಾಗಮಂಗಲ ಶಾಸಕ ಸುರೇಶ್​ಗೌಡಗೆ ನೋಟಿಸ್​​​​

By

Published : Jun 19, 2019, 10:54 AM IST

Updated : Jun 19, 2019, 12:00 PM IST


ಬೆಂಗಳೂರು:ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್​​ ಸೊಸೈಟಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು, ಈ ಅವ್ಯವಹಾರದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

SC, ST ನೌಕರರ ಸೈಟ್​​​​ ಗೋಲ್​ಮಾಲ್​​​​ ಆರೋಪ: ನಾಗಮಂಗಲ ಶಾಸಕ ಸುರೇಶ್​ಗೌಡಗೆ ನೋಟಿಸ್​​​​

ಸುರೇಶ್ ಗೌಡ ಅವರು 2000ರಿಂದ 2009 ಹಾಗೂ ಮತ್ತೊಂದು ಅವಧಿಯಲ್ಲಿ ದಿ ಏರ್ ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್​​ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ನೌಕರರಿಗೆ ಸೇರಬೇಕಿದ್ದ ಸೈಟ್​ಗಳನ್ನ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ ಎಂದು ಹಿಂದುಳಿದ ವರ್ಗಕ್ಕೆ ಸೇರಿದ ನೌಕರ ಗಣೇಶನ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ತನಿಖೆ ಶುರು ಮಾಡಲಾಗಿದ್ದು, ಶಾಸಕ ಸುರೇಶ್ ಗೌಡ ಅವರಿಗೆ ಜೂನ್ 21ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಶಾಸಕ ಸುರೇಶ್ ಗೌಡ ಜೊತೆಗೆ ಸೊಸೈಟಿಯ ಅಧ್ಯಕ್ಷರಾಗಿದ್ದ ಎಂ.ಎ.ಗೋಪಾಲ ಸ್ವಾಮಿ, ಎಂ.ಸಂತೋಷ್, ಕಾರ್ಯನಿರ್ವಾಹಕ ನಿರ್ದೇಶಕ ಬಿ.ಹೆಚ್.ಬಾಲಾಜಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ಪ್ರತಿ ಈಟಿವಿ ಭಾರತ್​ಗೆ ಲಭ್ಯವಾಗಿದೆ.

Last Updated : Jun 19, 2019, 12:00 PM IST

For All Latest Updates

TAGGED:

ABOUT THE AUTHOR

...view details