ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ಉದ್ಘಾಟನೆಗೆ ಮುಂದಾಗಿದೆ. ನಮ್ಮದೇ ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹರಸಾಹಸ ಪಟ್ಟಿದ್ದೇವೆ. ಹೀಗಿರುವಾಗ ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಸಾರ್ವಜನಿಕ ಮೇಲ್ಸೇತುವೆಗೆ ಇಡುವುದನ್ನು ಜೆಡಿಎಸ್ ಪಕ್ಷ ವಿರೋಧಿಸುತ್ತದೆ ಎಂದು ಜೆಡಿಎಸ್ ಬೆಂಗಳೂರು ನಗರದ ಅಧ್ಯಕ್ಷ ಆರ್.ಪ್ರಕಾಶ್ ಟ್ವೀಟ್ ಮಾಡಿದ್ದಾರೆ.
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ವಿರೋಧ ವ್ಯಕ್ತಪಡಿಸಿದ ಜೆಡಿಎಸ್ - ಯಲಹಂಕ ಮೇಲ್ಸೇತುವೆ
ನಮ್ಮದೇ ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹರಸಾಹಸ ಪಟ್ಟಿದ್ದೇವೆ. ಹೀಗಿರುವಾಗ ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಸಾರ್ವಜನಿಕ ಮೇಲ್ಸೇತುವೆಗೆ ಇಡುವುದನ್ನು ಜೆಡಿಎಸ್ ಪಕ್ಷ ವಿರೋಧಿಸುತ್ತದೆ ಎಂದು ಜೆಡಿಎಸ್ ಬೆಂಗಳೂರು ನಗರದ ಅಧ್ಯಕ್ಷ ಆರ್.ಪ್ರಕಾಶ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಾಡ ವಿರೋಧಿ ನೀತಿ ಅನುಸರಿಸುತ್ತಿದೆ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡುತ್ತಿರುವುದು ಕೂಡ ಬಿಜೆಪಿ ಸರ್ಕಾರದ ನಾಡ ವಿರೋಧಿ ಧೋರಣೆಯ ಮುಂದುವರೆದ ಭಾಗ ಎಂದು ಕಿಡಿಕಾರಿದ್ದಾರೆ.
ಈ ಸರ್ಕಾರಕ್ಕೆ ರಾಜ್ಯದ ಯಾವ ಮಹನೀಯರ ಹೆಸರು ಸಿಗಲಿಲ್ಲವೇ? ತಾಕತ್ತಿದ್ದರೆ ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ಯಾವ ವೀರ, ಮಹನೀಯರ ಹೆಸರು ಸಿಗಲಿಲ್ಲ. ಹಾಗಾಗಿ ಮಹಾರಾಷ್ಟ್ರದವರ ಹೆಸರನ್ನು ಆರಿಸಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಲಿ. ಆಗ ಇಂತಹ ನಾಡ ವಿರೋಧಿ ಸರ್ಕಾರವನ್ನು ಆರಿಸಿದ ತಪ್ಪಿಗೆ ಕನ್ನಡಿಗರು ಪಶ್ಚಾತ್ತಾಪ ಪಡುತ್ತೇವೆ ಎಂದಿದ್ದಾರೆ.