ಬೆಳಗಾವಿ: ಸಿದ್ದರಾಮಯ್ಯ ಅಮೃತ ಮಹೋತ್ಸವ ದೀಪಾವಳಿ ಆಫರ್ ಹಾಗೇ ಪಕ್ಷಕ್ಕೆ ಒಂದು ಶಕ್ತಿ ಕೊಟ್ಟಿದೆ. ರಾಜ್ಯ ಕಾಂಗ್ರೆಸ್ ಒಗ್ಗಟ್ಟಾಗಿದೆ. ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿ ಜನರು ಹಾಜರಾಗಿದ್ದಾರೆ. ಇದನ್ನು ಆಡಳಿತ ಪಕ್ಷದವರು ಒಪ್ಪುತ್ತಾರೆ. ನಾವು ಒಪ್ಪುತ್ತೇವೆ. ಮಾಧ್ಯಮದವರು ಒಪ್ಪುತ್ತಾರೆ. ಇದೊಂದು ಐತಿಹಾಸಿಕ ಸಮಾವೇಶವಾಗಿದ್ದು ಪಕ್ಷಕ್ಕೆ ಶಕ್ತಿ ಬಂದಿರುವುದರಲ್ಲಿ ಎರಡು ಮಾತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾಯಕರು ಸಮಾರಂಭಗಳ ವೇಳೆಯಲ್ಲಿ ಗಡಿಬಿಡಿಯಲ್ಲಿರುತ್ತಾರೆ. ಆ ವೇಳೆ ಹಿರಿಯರು, ಉಳಿದವರು ಸೂಚನೆ ಕೊಡೋದರಲ್ಲಿ ತಪ್ಪೇನೂ ಇಲ್ಲ. ಡಿಕೆಶಿ-ಸಿದ್ದರಾಮಯ್ಯ ಮನಸಾರೆ ಅಪ್ಪಿಕೊಂಡಿಲ್ಲ ಅಂತಾ ಚರ್ಚೆ ಆಗ್ತಿದೆ. ಮನಸಾರೆ ಅಪ್ಪಿಕೊಂಡಿಲ್ಲ ಅಂತಾ ಹೇಳಲು ಡಾಕ್ಟರ್ ಬಳಿ ಚೆಕಿಂಗ್ ಮಾಡಿಸಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರು ನನ್ನನ್ನು ಕರೆದು ಪಕ್ಷದ ಸಂಘಟನೆ, ಚುನಾವಣೆ ಹೇಗೆ ಮಾಡ್ತೀರಾ ಅಂತಾ ಕೆಲ ಚರ್ಚೆ ನಡೆಸಿದ್ರು ಎಂದು ತಿಳಿಸಿದರು. ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ ಬಂದವರೆಲ್ಲ ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂಬ ಕೆಲವರ ಹೇಳಿಕೆಗೆ ಪ್ರತಿಕ್ರಿಯಿಸಿ 10% ಅನ್ನು ಬಿಜೆಪಿಯವರು ತೆಗೆದುಕೊಳ್ಳಲಿ. ಅವರು ಹೇಳೋದು ಸರಿಯಿದೆ. ಬಿಜೆಪಿ ಶಾಸಕರು ಸಹ ಗಾಡಿ ಕೊಟ್ಟು ಕಳುಸಿದ್ದಾರೆ. ಅದರಲ್ಲಿ ಹತ್ತು ಪರ್ಸೆಂಟ್ ಮೈನಸ್ ಮಾಡೋಣ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆಗಸ್ಟ್ 9ರಂದು ಬಿಜೆಪಿ ಶಾಸಕ ಅಭಯ್ ಪಾಟೀಲ್, ಅನಿಲ್ ಬೆನಕೆಗೆ ಮೇಯರ್, ಉಪಮೇಯರ್ ಗೌನ್ ನೀಡುತ್ತೇನೆಂದು ವ್ಯಂಗ್ಯವಾಡಿದರು. ಬಿಜೆಪಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ಗೆ ಬರುವ ಬಗ್ಗೆ ಚರ್ಚೆ ಅಗಿಲ್ಲ. ಬಿಜೆಪಿ ಪಾಲಿಕೆ ಸದಸ್ಯರ ಗುಂಪಿನಲ್ಲಿ ಚರ್ಚೆ ಆಗಿದೆ. ನನ್ನ ಪ್ರಕಾರ ಎಂಎಲ್‌ಎ ಎಲೆಕ್ಷನ್ ಆಗೋವರೆಗೂ ಮೇಯರ್, ಉಪಮೇಯರ್ ಚುನಾವಣೆ ಆಗಲ್ಲ ಎಂದು ಟೀಕಿಸಿದರು.