ಕರ್ನಾಟಕ

karnataka

ETV Bharat / state

ಪ್ರಬಲ ಸಮುದಾಯಗಳಿಗೆ ಡಿಸಿಎಂ ಸ್ಥಾನ ಕೊಡುವಂತೆ ಒತ್ತಾಯಿಸಿದ್ದೇವೆ: ಸತೀಶ್ ಜಾರಕಿಹೊಳಿ - ಡಿಸಿಎಂ ಸ್ಥಾನ

ಲೋಕ ಸಮರ ಮುಂಚಿತವಾಗಿ ಪ್ರಬಲ ಸಮುದಾಯಗಳಿಗೆ ಡಿಸಿಎಂ ಸ್ಥಾನ ಕೊಡುವಂತೆ ಒತ್ತಾಯಿಸಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

By ETV Bharat Karnataka Team

Published : Jan 9, 2024, 6:27 PM IST

Updated : Jan 9, 2024, 7:35 PM IST

ಬೆಂಗಳೂರು : ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪ್ರಬಲ ಸಮುದಾಯಗಳಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಸುರ್ಜೇವಾಲ ಜೊತೆ ಸಭೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರತಿಫಲ ಸಿಗಲು ಇನ್ನೂ ಕಾಲಾವಕಾಶ ಇದೆ. ಚುನಾವಣೆ ಬಗ್ಗೆ ಚರ್ಚೆಯಾಗಿದೆ. ನಾಳೆ, ಚುನಾವಣೆ ಸಭೆ ಇದೆ, ದೆಹಲಿಯಲ್ಲಿ ಸಭೆ ಇದೆ. ನಮ್ಮ ಸ್ಥಿತಿಗತಿ ಸುರ್ಜೇವಾಲ ಮುಂದೆ ಹೇಳಿದ್ದೇವೆ. ನಿನ್ನೆ ಸುರ್ಜೇವಾಲಾಗೆ ಹೇಳಿದ್ದೇವೆ. ಪ್ರಬಲ ಸಮುದಾಯಗಳಿಗೆ ಡಿಸಿಎಂ ಸ್ಥಾನ ಕೊಡಬೇಕು. ಎಲ್ಲರೂ ಒಟ್ಟಾಗಿ ಕೇಳಿದ್ದೇವೆ. ಚುನಾವಣೆಯಲ್ಲಿ ಅನುಕೂಲ ಆಗುತ್ತೆ ಅಂದಿದ್ದೇವೆ ಎಂದರು.

ಸಮುದಾಯಗಳು ಬೆನ್ನಿಗೆ ನಿಲ್ಲಲು ಅನುಕೂಲ ಆಗುತ್ತೆ. ಎಷ್ಟು ಡಿಸಿಎಂ ಮಾಡ್ತಾರೆ ಎಂಬುದು ಹೈಕಮಾಂಡ್​ಗೆ ಬಿಟ್ಟಿದ್ದು. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾಡಬೇಕು. ಈ ಬಗ್ಗೆ ಅವರು ಹೈಕಮಾಂಡ್ ಗಮನಕ್ಕೆ ತರುತ್ತಾರೆ. ಹಿಂದೆ ಸಿಎಂ, ಡಿಸಿಎಂ ಮಾಡುವಾಗ ಚರ್ಚೆಯಾಗಿಲ್ಲ. ನಾವು ಡಿಸಿಎಂ ‌ಮಾಡಲು‌ ಮಾತ್ರ ಹೇಳಿದ್ದೇವೆ. ಯಾರಿಗೆ ಎಂದು ಹೇಳಿಲ್ಲ ಎಂದು ತಿಳಿಸಿದರು.

ಡಿಸಿಎಂ ವಿಚಾರವಾಗಿ ಡಿ‌ಕೆಶಿ ವರ್ಷನ್ ಬೇರೆ, ನಮ್ಮ ವರ್ಷನ್ ಬೇರೆ. ಅವರು ಡಿಸಿಎಂ ಆಗಿಯೇ ಇರ್ತಾರೆ. ಅವರ ಅಭಿಪ್ರಾಯ ಬೇರೆ. ಒಂದೇ ಡಿಸಿಎಂ ಎಂಬುದು ಡಿಕೆಶಿ ಅಭಿಪ್ರಾಯ. ಆದರೆ, ಈಗ ನಾವು ಮನವಿ ಮಾಡಿದ್ದೇವೆ. ನಿರ್ಧಾರ ಹೈಕಮಾಂಡ್ ನಾಯಕರು ಮಾಡಬೇಕು. ಸುರ್ಜೇವಾಲ ನಮ್ಮ ಮಾತಿಗೆ ಸಮ್ಮತಿಸಿದ್ದಾರೆ. ಡಿಸಿಎಂ ಮಾಡದೇ ಹೋದ್ರೆ ಏನು ಆಗಲ್ಲ‌. ಯಾರು ಪಕ್ಷ ಬಿಟ್ಟು ಹೋಗಲ್ಲ. ಡಿಮ್ಯಾಂಡ್, ರಿಕ್ವೆಸ್ಟು ಎರಡೂ ಒಂದೇ. ನಾವು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಬೇಕು : ಹೆಚ್ಚುವರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಯಾವಾಗ ಮಾಡ್ತಾರೋ ನೋಡಬೇಕು ಎಂದು (ಜನವರಿ -5-24) ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದರು. ಬೆಂಗಳೂರಿನಲ್ಲಿ ಅಂದು ಮಾತನಾಡಿದ್ದ ಅವರು, ಡಿಸಿಎಂ ಹುದ್ದೆಗಳ ಬಗ್ಗೆ ಸಚಿವ ರಾಜಣ್ಣ ಸಾಕಷ್ಟು ಬಾರಿ ಹೇಳಿದ್ದಾರೆ. ನಾವೂ ಕೂಡ ಹಿಂದೆ ಪದೇ ಪದೆ ಹೇಳಿದ್ದೇವೆ.‌ ಸಮುದಾಯವಾರು ಡಿಸಿಎಂ ಆಗಬೇಕು ಅಂತ ಇದೆ. ವರಿಷ್ಠರು ತೀರ್ಮಾನ ಮಾಡಬೇಕು. ಯಾವಾಗ ಮಾಡುತ್ತಾರೋ ನೋಡಬೇಕು.‌ ಅಲ್ಲಿವರೆಗೆ ನಾವು ಕಾಯಬೇಕು ಅಷ್ಟೇ. ನಾವೇನೂ ದೆಹಲಿಗೆ ಹೋಗಲ್ಲ. ಹೋದರೆ ಹೇಳುತ್ತೇನೆ ಎಂದಿದ್ದರು.

ಸಿಎಂ ಸಿದ್ದರಾಮಯ್ಯ ಜೊತೆ ಏನಾದರೂ ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ, ಸಿಎಂ ಕೂಡ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕು ಅಂತ ಹೇಳುತ್ತಾರೆ. ಅವರು ಕೂಡ ಮೊದಲಿಗೆ 4 ಡಿಸಿಎಂ ಮಾಡಬೇಕು ಅಂತ ಹೇಳಿದ್ದರಂತೆ ಎಂದಿದ್ದರು.

ಇದನ್ನೂ ಓದಿ:ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಬೇಕು: ಸತೀಶ್ ಜಾರಕಿಹೊಳಿ

Last Updated : Jan 9, 2024, 7:35 PM IST

ABOUT THE AUTHOR

...view details