ಬೆಂಗಳೂರು:ತಮಿಳುನಾಡಿನ ರಾಜಕೀಯ ವಲಯದಲ್ಲಷ್ಟೇ ಅಲ್ಲ ಭಾವನಾತ್ಮಕ ವಲಯದಲ್ಲೂ ಸಂಚಲನ ಮೂಡಿಸಿರುವ ಚಿನ್ನಮ್ಮ ಶಶಿಕಲಾರ ಸ್ವಾಗತಕ್ಕೆ ನಿನ್ನೆಯಿಂದಲೇ ಸಿದ್ಧತೆ ನಡೆದಿತ್ತು. ಇದೀಗ ಬೆಂಗಳೂರು-ಹೊಸೂರು ಹೆದ್ದಾರಿ ಮೂಲಕ ಶಶಿಕಲಾ ತಮ್ಮ ಸಾವಿರಾರು ಅಭಿಮಾನಿಗಳ ಸ್ವಾಗತದೊಂದಿಗೆ ಕರ್ನಾಟಕದ ಗಡಿ ಅತ್ತಿಬೆಲೆ ದಾಟಿ ತಮಿಳುನಾಡು ಪ್ರವೇಶಿಸಿದರು.
ಅದ್ಧೂರಿ ಸ್ವಾಗತದೊಂದಿಗೆ ಕರ್ನಾಟಕ ಗಡಿ ದಾಟಿದ ತಮಿಳುನಾಡಿನ ಚಿನ್ನಮ್ಮ - sasikala moves from karnataka
ಜೈಲಿನಿಂದ ಬಿಡುಗಡೆಯಾದ ಬಳಿಕ 10 ದಿನಗಳ ಕಾಲ ಬೆಂಗಳೂರಿನ ಹೋಟೆಲ್ನಲ್ಲಿಯೇ ವಿಶ್ರಾಂತಿ ಪಡೆದಿದ್ದ ಶಶಿಕಲಾ ನಟರಾಜನ್ ಇಂದು ಕರ್ನಾಟಕದಿಂದ ಚೆನ್ನೈಗೆ ಹೊರಟ್ಟಿದ್ದು, ಅಭಿಮಾನಿಗಳ ಅದ್ಧೂರಿ ಸ್ವಾಗತದೊಂದಿಗೆ ಇಂದು ಬೆಂಗಳೂರಿನ ಗಡಿ ದಾಟಿದ್ರು.
ಕರ್ನಾಟಕ ಗಡಿ ದಾಟಿದ ಶಶಿಕಲಾ
ಕರ್ನಾಟಕದ ಗಡಿಯಲ್ಲಿ ನಿನ್ನೆ ಕಟ್ಟಿದ್ದ ಶಶಿಕಲಾ ಸ್ವಾಗತ ಕೋರುವ ಕಟೌಟ್ಗಳನ್ನು ಮುಲಾಜಿಲ್ಲದೇ ತೆರವುಗೊಳಿಸಿದ್ದ ಅತ್ತಿಬೆಲೆ ಪೊಲೀಸರು ಇಂದು ಇಡೀ ಹೆದ್ದಾರಿ ಶೂನ್ಯ ಸಂಚಾರವನ್ನು ಏರ್ಪಡಿಸಿದ್ದರು. ಆದರೆ, ಅತ್ತಿಬೆಲೆ ಗಡಿಯಲ್ಲಿ ಕಿಕ್ಕಿರಿದ ಅಭಿಮಾನಿಗಳ ಜನಸಂದಣಿ ಅತ್ತಿಬೆಲೆ ನಂತರ ಹೊಸೂರಿನಲ್ಲಿ ಹೆದ್ದಾರಿ ತುಂಬಿ ಸಂಚಾರ ದಟ್ಟಣೆ ಏರ್ಪಡಿಸಿದ್ದರು.
ಕಾರಿನಲ್ಲಿ ಮುಗುಳ್ನಗೆ ಬೀರುತ್ತಾ ಜನರತ್ತ ಕೈಬೀಸಿ ಟಾಟಾ ಹೇಳಿ ತಮಿಳುನಾಡಿನತ್ತ ಶಶಿಕಲಾ ತೆರಳಿದರು. ಇಲ್ಲಿಗೆ ಕರ್ನಾಟಕದಲ್ಲಿಯೂ ತಮಿಳಿಗರ ಮನೆ ಮಾತಾಗಿದ್ದ ಶಶಿಕಲಾರ ಅಬ್ಬರ ಕರ್ನಾಟಕದಲ್ಲಿ ಇಂದಿಗೆ ಮುಕ್ತಾಯಗೊಂಡಿತು.