ಬೆಂಗಳೂರು: ಭಾರತದ ಉಕ್ಕಿನ ಮನುಷ್ಯನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಜ್ಞಾ ಬೋಧನೆ ಮಾಡಿದರು.
ಇಂದು ವಿಧಾನಸೌಧದ ಸಮ್ಮೇಳನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ, ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 'ರಾಷ್ಟ್ರೀಯ ಏಕತಾ ದಿವಸ ಆಚರಣೆ ಮತ್ತು ಪ್ರತಿಜ್ಞಾ ಬೋಧನೆ ಹಾಗೂ ಜಾಗೃತಿ ಅರಿವು ಸಪ್ತಾಹದ ಪ್ರತಿಜ್ಞಾ ವಚನ ಬೋಧನೆ' ಮಾಡಿದರು.