ಕರ್ನಾಟಕ

karnataka

ETV Bharat / state

ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿ ಉದ್ಘಾಟನೆ - Sardar Vallabhbhai Patel Academy Inaugurated

ಬೆಂಗಳೂರಿನ ಯಡಿಯೂರು ವಾರ್ಡ್​​​ನಲ್ಲಿ ಉಚಿತ ಶಿಕ್ಷಣ ಸಿಗುವ ವ್ಯವಸ್ಥೆ ಮಾಡಲಾಗಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿಯು ಉಚಿತ ಶಿಕ್ಷಣ ನೀಡುವ ಮೂಲಕ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕನಸಿಗೆ ನೀರೆರೆಯಲು ಸಿದ್ಧವಾಗಿದೆ.

Sardar Vallabhbhai Patel Academy
ಸರ್ದಾರ್ ವಲ್ಲಭಭಾಯ್ ಪಟೇಲ್ ಅಕಾಡೆಮಿ ಲೋಕಾರ್ಪಣೆ

By

Published : Jun 14, 2020, 12:38 AM IST

ಬೆಂಗಳೂರು:ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಡಿಜಿಟಲ್ ಲೈಬ್ರರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ, ಸರ್ದಾರ್ ವಲ್ಲಭಭಾಯಿ ಪಟೇಲ್​​​ ಅಕಾಡೆಮಿಯು ಶನಿವಾರ ಆರಂಭಗೊಂಡಿದೆ. ನಗರದ ಯಡಿಯೂರು ವಾರ್ಡ್​​​ನ, ಯಡಿಯೂರು ಕೆರೆ ಬಳಿ ಇರುವ ಅಕಾಡೆಮಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟಿಸಿದರು.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಬಿಬಿಎಂಪಿ ಅನುದಾನದಡಿ ಈ ಕಟ್ಟಡವನ್ನು ಸುಮಾರು ಆರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ‌. ಲಕ್ಷಾಂತರ ಪುಸ್ತಕಗಳುಳ್ಳ ಇ-ಲೈಬ್ರರಿ ಲೋಕಾರ್ಪಣೆಯಾಗಿದ್ದು, ಸಾರ್ವಜನಿಕರು ಸೋಮವಾರದಿಂದ ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಸರ್ದಾರ್ ವಲ್ಲಭಭಾಯ್ ಪಟೇಲ್ ಅಕಾಡೆಮಿ ಲೋಕಾರ್ಪಣೆ

ಈ ವೇಳೆ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮೇಯರ್ ಗೌತಮ್ ಕುಮಾರ್, ಉಪ ಮೇಯರ್ ಮೋಹನ್ ರಾಜ್ , ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಉಪಸ್ಥಿತರಿದ್ದರು.

For All Latest Updates

ABOUT THE AUTHOR

...view details