ಬೆಂಗಳೂರು: ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆಯೇ ಸರಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸುಧಾಕರ್ ವಿವಾದಾತ್ಮಕ ಹೇಳಿಕೆಗೆ ಕಿಡಿ ಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾವು ರಾಜಕೀಯದಲ್ಲಿರುವವರು. ಬಡಿದಾಡುತ್ತೇವೆ, ಬೈದಾಡಿಕೊಳ್ಳುತ್ತೇವೆ. ಆದರೆ, ಬಡಿದಾಟಗಳಲ್ಲಿ ಹೆಂಡತಿ, ಮಕ್ಕಳನ್ನು ತರುವುದು ನಮ್ಮ ನಮ್ಮ ಕುಟುಂಬಗಳಿಗೆ ನಾವೇ ಮಾಡಿಕೊಂಡ ಅಪಮಾನ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ಕುಟುಂಬಗಳನ್ನು ಅಡ್ಡತರುವುದು ವಂಚನೆಯೇ ಸರಿ. ನಮ್ಮನ್ನೇ ನಂಬಿದ ಕುಟುಂಬಸ್ಥರಿಗೆ ಎಂದಿಗೂ ಅಪಮಾನವಾಗಬಾರದು ಎಂದು ತಿಳಿಸಿದ್ದಾರೆ.