ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್ಡಿ ಡ್ರಗ್ಸ್ ಪೆಡ್ಲರ್ಸ್ ವಿಚಾರಣೆಯನ್ನು ಮುಂದುವರೆಸಿದೆ.
ಸದ್ಯ ಬಂಧಿತರಾಗಿರುವ ಕೇರಳ ಮೂಲದ ಡ್ರಗ್ಸ್ ಪೆಡ್ಲರ್ಗಳ ಮಾಹಿತಿ ಆಧಾರದ ಮೇರೆಗೆ ಐಎಸ್ಡಿ ಅಧಿಕಾರಿಗಳು ನೋಟಿಸ್ ನೀಡಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಶಕ್ಕೆ ಪಡೆದ ಪೆಡ್ಲರ್ಗಳಿಗೆ ಬಹುತೇಕ ಗ್ರಾಹಕರು ಯಾರು ಎಂಬದೇ ಗೊತ್ತಿಲ್ಲ. ಹೀಗಾಗಿ ಕೇವಲ ಅವರ ಕಾಲ್ ಡಿಟೈಲ್ಸ್ ಆಧರಿಸಿ ಐಎಸ್ಡಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬಹುತೇಕ ವ್ಯಸನಿಗಳು ಡಾರ್ಕ್ ನೆಟ್ ಬಳಕೆ ಮಾಡಿ ನಕಲಿ / ತಾತ್ಕಾಲಿಕ ವಿಳಾಸ ನೀಡಿ ಡ್ರಗ್ಸ್ ಖರೀದಿಸಿರುವುದು ಪತ್ತೆಯಾಗಿದೆ. ಹೀಗಾಗಿ ಈವರೆಗೂ 8 ಜನರಿಗೆ ನೋಟಿಸ್ ನೀಡಿರುವ ಐಎಸ್ಡಿ ನಟ ಯೋಗೀಶ್, ಮಾಜಿ ಕ್ರಿಕೆಟಿಗ ಎಸ್ಸಿ ಅಯ್ಯಪ್ಪ, ಅಭಿಶೇಕ್ ದಾಸ್, ಗೀತಾ ಭಾರತಿ ಭಟ್, ರಶ್ಮಿತಾ ಚೆಂಗಪ್ಪ, ನಿಶ್ಚಿತಾ ಶರತ್ ಸೇರಿ 6 ಜನರ ವಿಚಾರಣೆ ನಡೆಸಿದೆ.
ಇನ್ನಿಬ್ಬರು ರಾಜಕೀಯ ಮಕ್ಕಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದರೂ ಕೂಡ ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಸದ್ಯ ಐಎಸ್ಡಿ ಅಧಿಕಾರಿಗಳು ರಾಜಕಾರಣಿಗಳ ಮಕ್ಕಳ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಹೆಸರನ್ನು ಬಿಟ್ಟುಕೊಡದೆ ಸೈಲೆಂಟಾಗಿ ರಾಜಕಾರಣಿಗಳ ಮಕ್ಕಳಿಗೆ ಬಲೆ ಬೀಸಿದ್ದಾರೆ.