ಕರ್ನಾಟಕ

karnataka

ಸಿಡಿ ಪ್ರಕರಣದ ಸಂತ್ರಸ್ತೆ ಹೇಳಿಕೆ ಪರಿಶೀಲಿಸಿದಾಗ ಹಲವು ಸಂಶಯ ಮೂಡಲಿದೆ: ಸಂಕೇತ ಏಣಗಿ

By

Published : Mar 14, 2021, 2:57 PM IST

ಸಿಡಿ ಪ್ರಕರಣದ ಸಂತ್ರಸ್ತೆ ಹೇಳಿಕೆಯನ್ನು ಪರಿಶೀಲಿಸಿದಾಗ ಅಧಿಕಾರ ದುರ್ಬಳಕೆ, ನಂಬಿಕೆ ದ್ರೋಹ, ಅತ್ಯಾಚಾರ ಹಾಗು ಜೀವ ಬೆದರಿಕೆ ಸಂಶಯ ಮೂಡಲಿದೆ ಎಂದು ಕಾಂಗ್ರೆಸ್ ವಕ್ತಾರ ಸಂಕೇತ ಏಣಗಿ ತಿಳಿಸಿದ್ದಾರೆ.

sanketha enagi
ಕಾಂಗ್ರೆಸ್ ವಕ್ತಾರ ಸಂಕೇತ ಏಣಗಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆ ಹೇಳಿಕೆಯನ್ನು ಪರಿಶೀಲಿಸಿದಾಗ, ಅಧಿಕಾರ ದುರ್ಬಳಕೆ, ನಂಬಿಕೆ ದ್ರೋಹ, ಅತ್ಯಾಚಾರ, ಜೀವ ಬೆದರಿಕೆ ಸಂಶಯ ಮೂಡಲಿದೆ ಎಂದು ಕಾಂಗ್ರೆಸ್ ವಕ್ತಾರ ಸಂಕೇತ ಏಣಗಿ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈವರೆಗೂ ರಮೇಶ್ ಜಾರಕಿಹೊಳಿ ಮೇಲೆ ಎಫ್.ಐ.ಆರ್ ದಾಖಲಾಗಿಲ್ಲ. ಜಾರಕಿಹೊಳಿ ಸಹೋದರರು ನೀಡುತ್ತಿರುವ ಹೇಳಿಕೆಗಳು ಪರೋಕ್ಷವಾಗಿ ಬೆದರಿಕೆ ಹಾಕುವಂತಿದೆ. ಸರ್ಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಪಿಮುಷ್ಠಿಯಲ್ಲಿ ಇರುವ ಹಾಗಿದೆ.

11 ದಿನಗಳ ಬಳಿಕ ಕೊಟ್ಟ ದೂರಿಗೆ ಎಫ್.ಐ.ಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಮೇಲೆ ಕೊಟ್ಟ ದೂರಿಗೆ ಎಫ್.ಐ.ಆರ್ ದಾಖಲಾಗಿಲ್ಲ. ಸರ್ಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಹಾಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details