ಕರ್ನಾಟಕ

karnataka

ETV Bharat / state

ನೂತನ ಬೇಕರಿ ಉತ್ಪನ್ನ 'ಮಿಲ್ಲೀಸ್' ​​ಶಾಖೆ ಉದ್ಘಾಟಿಸಿದ ನಟಿ ಸಂಜನಾ - undefined

ನಟಿ ಸಂಜನಾ ಗರ್ಲಾನಿ ಇತ್ತೀಚೆಗೆ ಬೆಂಗಳೂರಿನಲ್ಲಿ ಹೊಸದಾಗಿ ಆರಂಭಗೊಂಡ 'ಮಿಲ್ಲೀಸ್' ಕುಕೀಸ್ ಬೇಕರಿ ಉತ್ಪನ್ನಗಳ ಶಾಖೆಯನ್ನು ಉದ್ಘಾಟಿಸಿದರು.

ಸಂಜನಾ ಗಲ್ರಾನಿ

By

Published : Apr 29, 2019, 12:07 PM IST

ಯುಕೆಯ ಜನಪ್ರಿಯ 'ಮಿಲ್ಲೀಸ್' ಬೇಕರಿ ಉತ್ಪನ್ನಗಳ ಸಂಸ್ಥೆ ಮೈಲ್ ಕುಕೀಸ್ ಬೆಂಗಳೂರು ಮಾರುಕಟ್ಟೆಗೂ ಕಾಲಿಟ್ಟಿದ್ದು, ವೈಟ್​​​ಫೀಲ್ಡ್​​​ನ ಫೀನಿಕ್ಸ್ ಮಾರ್ಕೆಟ್​​ ಸಿಟಿಯಲ್ಲಿ ಹೊಸ ಮಳಿಗೆಯೊಂದನ್ನು ಆರಂಭಿಸಿದೆ.

ಮಿಲ್ಲೀಸ್​​​ನ ಹೊಸ ಮಳಿಗೆಯನ್ನು ನಟಿ ಸಂಜನಾ ಗರ್ಲಾನಿ ಇತ್ತೀಚೆಗೆ ಉದ್ಘಾಟಿಸಿ ಬ್ಯುಸಿನೆಸ್ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಮಿಲ್ಲೀಸ್​​​ ತನ್ನ 11ನೇ ಮಳಿಗೆಯನ್ನು ದೇಶದಲ್ಲಿ ಆರಂಭಿಸುತ್ತಿದ್ದು, ಬೆಂಗಳೂರಿಗಿಂತ ಮೊದಲು ದಿಲ್ಲಿ, ಮುಂಬೈ, ಹೈದರಾಬಾದ್​​​​, ಕೋಲ್ಕತ್ತಾ ಹಾಗೂ ಸೂರತ್‌ಗಳಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿದೆ. ಮೂರು ದಶಕಗಳಿಗೂ ಅಧಿಕ ಸಮಯದಿಂದ ಮಿಲ್ಲೀಸ್​​​​​ ತಾಜಾ ಕೇಕ್ ಹಾಗೂ ಮೃದುವಾದ ಕುಕೀಸ್​​​​ಗಳನ್ನು ಪ್ರತಿದಿನ ಫ್ರೆಶ್ ಆಗಿ ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುವ ಕೆಲಸ ಮಾಡುತ್ತಿದೆ.

'ಮಿಲ್ಲೀಸ್' ಶಾಖೆ ಉದ್ಘಾಟಿಸಿದ ಸಂಜನಾ ಗರ್ಲಾನಿ

ಮಿಲ್ಲೀಸ್​​​ ಕುಕೀಸ್​​​​​​ ಮಾಲೀಕ ಹರೀಶ್ ಮಾತನಾಡಿ, ನಾನು ಜನಪ್ರಿಯ ಉತ್ಪನ್ನದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಮಿಲ್ಲೀಸ್​​​ ಇತ್ತೀಚೆಗೆ ಕುಕೀಸ್​​​​​​ಗಳಿಂದಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಯುಕೆಯಲ್ಲಿ ಕಳೆದ ಮೂರು ದಶಕಗಳಿಂದ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಹೊಸ ಬಗೆಯ ತಿಂಡಿಗಳು, ಕುಕೀಸ್‌ಗಳು ಹಾಗೂ ಕೇಕ್​​​​​​​​​​​​​​​​​​​​​​​​​​​​​ಗಳನ್ನು ತಯಾರಿಸುವ ವಿಚಾರದಲ್ಲಿ ಹೊಸ ಪ್ರಯೋಗಗಳನ್ನು ಇಷ್ಟಪಡುವುದಿಲ್ಲ. ಸಾಂಪ್ರದಾಯಿಕ ರುಚಿ ಒಳಗೊಂಡ ಮಿಲ್ಲೀಸನ್ನು ನಾವು ಬೆಂಗಳೂರಿನ ಆಹಾರಪ್ರಿಯರ ನೆಚ್ಚಿನ ತಾಣವಾಗಿಸುವ ಗುರಿ ಹೊಂದಿದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details