ಬೆಂಗಳೂರು:ರಾಜಧಾನಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ಸಾಮೂಹಿಕ ಆತ್ಯಾಚಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೆಹಲಿ ಮೂಲದ ನಾಲ್ವರು ಆರೋಪಿಗಳನ್ನು ಸಂಜಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಾದ ರಜತ್, ಶಿವರಾಣ್, ದೇವ್ ಸರೋಯಿ ಹಾಗೂ ಯೊಗೇಶ್ ಕುಮಾರ್ ಎಂಬುವರನ್ನ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳದ ಯುವತಿ ಮೇಲೆ ಗ್ಯಾಂಗ್ ರೇಪ್: ನಾಲ್ವರು ಆರೋಪಿಗಳ ಬಂಧನ - ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳದ ಯುವತಿ ಮೇಲೆ ಗ್ಯಾಂಗ್ ರೇಪ್ ನಾಲ್ವರು ಆರೋಪಿಗಳ ಬಂಧನ
Gangrape in Bengaluru.. ಆರೋಪಿಗಳ ಪೈಕಿ ರಜತ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನ ಪರಿಚಯಿಸಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಸಲುಗೆ ಹೆಚ್ಚಾದ ಹಿನ್ನೆಲೆ ಇದೇ ತಿಂಗಳು 24ರಂದು ಯುವತಿಯನ್ನ ರಜತ್ ಮನೆಗೆ ಆಹ್ವಾನಿಸಿದ್ದ. ಈ ವೇಳೆ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳು ದೆಹಲಿ ಮೂಲದವರಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಈಜುಗಾರರಾಗಿ ಗುರುತಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಆರೋಪಿಗಳ ಪೈಕಿ ರಜತ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನ ಪರಿಚಯಿಸಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಇಬ್ಬರು ಮೊಬೈಲ್ ನಂಬರ್ಅನ್ನು ಸಹ ವಿನಿಮಯ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಹೀಗೆ ಇಬ್ಬರ ಮಧ್ಯೆ ಸಲುಗೆ ಹೆಚ್ಚಾದ ಹಿನ್ನೆಲೆ ಇದೇ ತಿಂಗಳು 24ರಂದು ಯುವತಿಯನ್ನ ರಜತ್ ಮನೆಗೆ ಆಹ್ವಾನಿಸಿದ್ದನಂತೆ.
ಆರೋಪಿಯ ಸ್ನೇಹಿತರೆಲ್ಲರೂ ಯುವತಿಯೊಂದಿಗೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿಯಾಗಿದ್ದ ಕಾರಣ ರಜತ್ ರೂಮಿನಲ್ಲಿ ಯುವತಿ ಉಳಿದುಕೊಂಡಿದ್ದಳು. ಈ ವೇಳೆ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾಳೆ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.