ಆನೇಕಲ್:ಡ್ರಗ್ಸ್ ಆರೋಪದಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಂಜನಾರನ್ನು ನೋಡಲು ನಟಿಯ ತಂದೆ ಮತ್ತು ತಾಯಿ ಆಗಮಿಸಿದ್ದರು. ಜೊತೆಗೆ ಬಟ್ಟೆಗಳನ್ನು ತಂದಿದ್ದು ಪೊಲೀಸರ ಬಳಿ ತಪಾಸಣೆಗೆ ನೀಡಿದ್ದಾರೆ. ಅಲ್ಲದೇ ಮಗಳಿಗಾಗಿ ಮನೆಯಿಂದಲೇ ಊಟ ತಂದಿದ್ದಾರೆ.
ಈಗಾಗಲೇ ಜೈಲಿನಲ್ಲಿರುವ ಮತ್ತೊಬ್ಬ ನಟಿ ರಾಗಿಣಿ ನಾಲ್ಕು ದಿನದಿಂದ ಹೊರಗಡೆ ಬಂದಿಲ್ಲ. ಹೊರಗೆ ಓಡಾಡುವ ಅವಕಾಶವಿದ್ದರೂ ಅವಕಾಶ ಉಪಯೋಗಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ. ಸಂಜನಾ ಬಂದ ನಂತರ ರಾಗಿಣಿಯ ಕೊಠಡಿಯನ್ನು ಬದಲಾಯಿಸಿ ಇಬ್ಬರಿಗೂ ಒಂದೇ ಕೊಠಡಿ ನೀಡಲಾಗಿದೆ.
ಈ ಮೊದಲು ಆ ಕೊಠಡಿಯಲ್ಲಿ ಮೂವರು ಮಹಿಳಾ ಖೈದಿಗಳಿದ್ದರು. ಹೆಚ್ಚಿನ ಭದ್ರತೆಯಿಂದಾಗಿ ಇದೀಗ ಆ ಮೂವರು ಇದ್ದಂತಹ ಕೊಠಡಿಗೆ ಸಂಜನಾರನ್ನ ರಾಗಿಣಿ ಕೊಠಡಿಗೆ ವರ್ಗಾಯಿಸಿದ್ದಾರೆ. ಸದ್ಯ ಬೆಳಗ್ಗಿನಿಂದಲೂ ಇಬ್ಬರು ಮಾತನಾಡಿಕೊಂಡು ಇದ್ದಾರೆ. ನಿನ್ನೆ ರಾಗಿಣಿ ತಂದೆ-ತಾಯಿ ಇಂಗ್ಲಿಷ್ ಪುಸ್ತಕ ತಂದು ನೀಡಿದ್ದರು. ಅದನ್ನು ಜೈಲು ಸಿಬ್ಬಂದಿ ಇಂದು ರಾಗಿಣಿಗೆ ನೀಡಿದ್ದಾರೆ.
ಸಂಜನಾಗೆ ತಂದಿದ್ದ ಮನೆ ಊಟವನ್ನು ಮತ್ತು ಜ್ಯೂಸನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ಆದ್ರೆ ಬಟ್ಟೆ ಮತ್ತು ಚಾಕೊಲೇಟ್ ನೀಡಿ ಸಂಜನಾ ತಂದೆ ಮನೋಹರ್, ತಾಯಿ ರೇಷ್ಮಾ ಗಲ್ರಾನಿ ವಾಪಸ್ಸಾದರು.
ಇಬ್ಬರು ನಟಿಯರಿಗೆ ಸಾಮಾನ್ಯ ಖೈದಿಗಳಿಗೆ ನೀಡುವ ಊಟವನ್ನೇ ನೀಡಲಾಗಿದೆ. ನಾಳೆ ಸಂಜನಾಳ ಜಾಮೀನು ವಿಚಾರಣೆಯಿದೆ. ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗುವ ಸಾಧ್ಯತೆಯಿದೆ.