ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿಯನ್ನು ಬಂಧಿಸಿದ್ದು, ಈ ವಿಚಾರವಾಗಿ ಸಂಜನಾ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗಳ ಮೇಲಿನ ಆರೋಪ ಸುಳ್ಳು, ದೇವರ ದಯೆಯಿಂದ ಒಳ್ಳೆಯದಾಗುತ್ತೆ: ಸಂಜನಾ ತಾಯಿ ಹೇಳಿಕೆ - ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ
ನನ್ನ ಮಗಳ ಮೇಲಿನ ಆರೋಪ ಸುಳ್ಳು. ಪೊಲೀಸರಿಂದ ತನಿಖೆ ನಡೆಯಲಿ. ಎಲ್ಲವನ್ನೂ ಹೇಳುವ ಸಮಯ ಬರುತ್ತೆ. ನನ್ನ ಮಗಳು ಆರೋಪ ಮುಕ್ತಳಾಗಿ ಬೇಗ ಹೊರಬರುತ್ತಾಳೆ ಎಂದು ಸಂಜನಾ ತಾಯಿ ರೇಷ್ಮಾ ಗಲ್ರಾನಿ ಹೇಳಿದ್ದಾರೆ.
ರೇಷ್ಮಾ ಗಲ್ರಾನಿ
ನನ್ನ ಮಗಳ ಮೇಲಿನ ಆರೋಪ ಸುಳ್ಳು. ಪೊಲೀಸರಿಂದ ತನಿಖೆ ನಡೆಯಲಿ. ಏನೂ ಆಗಲ್ಲ. ದೇವರ ದಯೆಯಿಂದ ಎಲ್ಲವೂ ಒಳ್ಳೇದಾಗುತ್ತೆ. ಎಲ್ಲವನ್ನೂ ಹೇಳುವ ಸಮಯ ಬರುತ್ತೆ. ನನ್ನ ಮಗಳು ಆರೋಪ ಮುಕ್ತಳಾಗಿ ಬೇಗ ಹೊರಬರುತ್ತಾಳೆ ಎಂದು ಸಂಜನಾ ತಾಯಿ ರೇಷ್ಮಾ ಗಲ್ರಾನಿ ಹೇಳಿದ್ದಾರೆ.
ನಟಿ ಸಂಜನಾರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಸಂಜನಾಗೆ ಮೆಡಿಕಲ್ ಚೆಕಪ್ ನಡೆಸಿದ್ದಾರೆ.