ಕರ್ನಾಟಕ

karnataka

ETV Bharat / state

ಜೈಲಿನ ನಿಯಮ ಮೀರಿದ ಸಂಜನಾ, ರಾಗಿಣಿ: ನಟಿಮಣಿಯರ ವಿರುದ್ಧ ಗರಂ ಆದ ಜೈಲಾಧಿಕಾರಿಗಳು - Sandlwood drug link case

ನಿಯಮ ಮೀರಿ ರಾಗಿಣಿ ಮತ್ತು ಸಂಜನಾ ಬೇಕಾದ ವಸ್ತುಗಳನ್ನು ಜೈಲಿಗೆ ತರಿಸಿಕೊಂಡಿದ್ದು, ಈ ವಿಷಯ ಗೊತ್ತಾಗಿ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Sanjana, Ragini violated Prision rules
ಜೈಲಿನ ನಿಯಮ ಮೀರಿದ ಸಂಜನಾ, ರಾಗಿಣಿ

By

Published : Oct 14, 2020, 10:30 AM IST

ಬೆಂಗಳೂರು : ಡ್ರಗ್​ ಜಾಲದೊಂದಿಗಿನ ನಂಟು ಆರೋಪದಲ್ಲಿ ಜೈಲು ಸೇರಿರುವ ನಟಿಯಾರದ ರಾಗಿಣಿ ಮತ್ತು ಸಂಜನಾ, ಮನೆಗೆ ಕರೆ ಮಾಡಲು ಕೊಟ್ಟ ಜೈಲಿನ ಪೋನ್ ಬೂತ್​ನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮನೆಗೆ ಕರೆ ಮಾಡಿ ಜೈಲಾಧಿಕಾರಿಗಳ ಅನುಮತಿ ಪಡೆಯದೇ ತನಗೆ ಬೇಕಾಗಿರುವ ವಸ್ತುಗಳನ್ನು ತರಿಸಿಕೊಂಡು ಸಿಕ್ಕಿ ಬಿದ್ದಿದ್ದಾರೆ.

ಎರಡು ದಿನಗಳ ಹಿಂದೆ ರಾಗಿಣಿ ಮನೆಯಿಂದ ನೀರು ಬಿಸಿ ಮಾಡುವ ಯಂತ್ರ ಜೈಲಿಗೆ ತರಿಸಿಕೊಂಡಿದ್ದಾರೆ. ಇದನ್ನು ಮನೆಯವರು ಕೊರಿಯರ್ ‌ಮೂಲಕ ಕಳುಹಿಸಿದ್ದು, ಜೈಲಿನಲ್ಲಿ ತಪಾಸಣೆ ವೇಳೆ ರಾಗಿಣಿ ಕಳ್ಳಾಟ ಬಯಲಾಗಿದೆ. ಹೀಗಾಗಿ, ಅಧಿಕಾರಿಗಳು ರಾಗಿಣಿಗೆ ಎಚ್ಚರಿಕೆ ನೀಡಿದ್ದು, ಜೈಲಿನ ನಿಯಮ ಮೀರದಂತೆ ಸೂಚಿಸಿದ್ದಾರೆ.

ಮತ್ತೊಂದೆಡೆ ಸಂಜನಾಳದ್ದು ಕೂಡ ಇದೆ ಕಥೆಯಾಗಿದೆ. ಹತ್ತನೇ ತಾರೀಖಿನಂದು ಹುಟ್ಟು ಹಬ್ಬವಿತ್ತು. ಹೀಗಾಗಿ, ಸಂಜಾನಾ ಮನೆಯವರು ಕೆಲ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ, ಬಟ್ಟೆಗಳನ್ನು ಹೊರತುಪಡಿಸಿ ಇನ್ನೆಲ್ಲಾ ವಸ್ತುಗಳನ್ನು ಅಧಿಕಾರಿಗಳು ವಾಪಸ್​ ಕಳುಹಿಸಿದ್ದಾರೆ. ಜೈಲಿನ ನಿಯಮದ ಪ್ರಕಾರ ವಿಚಾರಣಾಧೀನಾ ಖೈದಿಗೆ ಊಟ, ತಿಂಡಿ, ಬಟ್ಟೆ ಕೊಡಲು ಅವಕಾಶವಿದೆ. ಇದನ್ನು ಹೊರತು ಪಡಿಸಿ ಯಾವುದೇ ಸಾಮಗ್ರಿ ನೀಡಲು ಅವಕಾಶವಿಲ್ಲ.

ಕೊರೊನಾ ಹಿನ್ನೆಲೆ ಮೇಲೆ ತಿಳಿಸಿದ ವಸ್ತುಗಳನ್ನು ನೀಡುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಅನುಕಂಪದ ಆಧಾರದ ಮೇರೆಗೆ ಒಂದೆರಡು ವಾರ ನಟಿಯರ ಮನೆಯವರಿಗೆ ಊಟ ತಂದು ಕೊಡಲು ಅವಕಾಶ ನೀಡಲಾಗಿತ್ತು. ಆದರೆ, ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹಿನ್ನೆಲೆ ಜೈಲಾಧಿಕಾರಿಗಳು ಗರಂ ಆಗಿದ್ದಾರೆ.

ABOUT THE AUTHOR

...view details