ಬೆಂಗಳೂರು: ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರ ತಾಯಿಯು ಮಗಳನ್ನು ನೋಡಲು ಬಿಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.
ಸಂಜನಾ ಸಿಸಿಬಿ ಕಚೇರಿಗೆ ಎಂಟ್ರಿ ಕೊಟ್ಟ ತಕ್ಷಣ ಸುಸ್ತಾಗ್ತಿದೆ ಎಂದು ತನಿಖಾಧಿಕಾರಿಗಳ ಬಳಿ ತಿಳಿಸಿದ ಕಾರಣ ಸದ್ಯದ ಮಟ್ಟಿಗೆ ಆಕೆಗೆ 10 ನಿಮಿಷಗಳ ಕಾಲ ಸಮಯಾವಕಾಶ ನೀಡಿದ್ದಾರೆ. ಸಂಜನಾ ಬಗ್ಗೆ ಬಲವಾದ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರು ಕಲೆಹಾಕಿದ್ದು, ಫೋಟೋ ಮತ್ತು ವಿಡಿಯೋಗಳನ್ನ ಹೊರತುಪಡಿಸಿ ಬೇರೆ ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗ್ತಿದೆ.
ಡ್ರಗ್ಸ್ ಜಾಲದ ಆರೋಪಿಗಳಾದ ರಾಗಿಣಿ, ವಿರೇನ್ ಖನ್ನಾ, ರಾಹುಲ್, ನಿಯಾಜ್ ಎಲ್ಲರ ಹೇಳಿಕೆ ಆಯಾಮದಲ್ಲಿ ಸಂಜನಾ ವಿಚಾರಣೆ ಮಾಡಲು ಸಿಸಿಬಿ ನಿರ್ಧರಿಸಿದೆ. ವಿಚಾರಣೆಯಲ್ಲಿ ಸಂಜನಾ ಕಿರಿಕ್ ಮಾಡುವ ಹಾಗಿಲ್ಲ. ಯಾಕೆಂದರೆ ಎಲ್ಲಾ ದಾಖಲೆಗಳನ್ನಿಟ್ಟುಕೊಂಡೇ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ. ಸಂಜೆ ವೇಳೆಗೆ ಸಂಜನಾರನ್ನ ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಇತ್ತ ಸಂಜನಾ ತಾಯಿಯನ್ನ ಕೂಡ ತನಿಖಾಧಿಕಾರಿಗಳು ಕರೆತಂದಿದ್ದು, ತನಿಖೆ ನಡೆಯುತ್ತಿರುವ ಸ್ಥಳಕ್ಕೆ ಸಂಜನಾ ತಾಯಿ ಹೋಗಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಈ ವೇಳೆ ಸಿಸಿಬಿ ಸಿಬ್ಬಂದಿ ಮೊದಲನೇ ಮಹಡಿಯಲ್ಲಿ ವಿಚಾರಣೆ ನಡೀತಿದೆ. ಅಲ್ಲಿಗೆ ಹೋಗುವ ಹಾಗಿಲ್ಲ ಎಂದು ತಡೆದಿದ್ದಾರೆ.