ಕರ್ನಾಟಕ

karnataka

ETV Bharat / state

ಡ್ರಗ್​​​ ಜಾಲ ಪ್ರಕರಣ: ಸಂಜನಾಗೆ ಮುಳುವಾಗಲಿದೆಯಾ ಈ ಮೂವರ ಹೇಳಿಕೆಗಳು? - ನಟಿ ಸಂಜನಾಗೆ ಸಿಸಿಬಿ ತನಿಖೆ

ಈಗಾಗಲೇ ಬಂಧಿತನಾಗಿರುವ ಡ್ರಗ್ ಪೆಡ್ಲರ್ ನಿಯಾಜ್ ಅಹಮದ್ ಹಾಗು ರಾಹುಲ್ ರಾಕಿ ಬ್ರದರ್ ಜೊತೆ ಇರುವ ಫೋಟೋಗಳು ವೈರಲ್​ ಆಗಿದ್ದು, ಇವು ಸಂಜನಾಗೆ ಮುಳುವಾಗಲಿವೆ ಎನ್ನಲಾಗ್ತಿದೆ. ಆರೋಪಿಗಳಾದ ನಿಯಾಜ್, ರಾಹುಲ್ ಹಾಗು ಪೃಥ್ವಿ ಈ ಮೂವರ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ.

sanjana gulrani
ನಟಿ ಸಂಜನಾ

By

Published : Sep 8, 2020, 12:10 PM IST

ಬೆಂಗಳೂರು: ನಟಿ ಸಂಜನಾಗೆ ಸಿಸಿಬಿ ಅಧಿಕಾರಿಗಳು‌ ಬಿಗ್ ಶಾಕ್ ಕೊಡಲು ಮುಂದಾಗಿದ್ದಾರೆ. ಹೌದು, ಈಗಾಗಲೇ ಬಂಧಿತನಾಗಿರುವ ಡ್ರಗ್ ಪೆಡ್ಲರ್ ನಿಯಾಜ್ ಅಹಮದ್ ಹಾಗು ರಾಹುಲ್ ರಾಕಿ ಬ್ರದರ್ ಜೊತೆ ಇರುವ ಫೋಟೋಗಳು ಸದ್ಯ ವೈರಲ್​ ಆಗಿದ್ದು, ಇವು ಸಂಜನಾಗೆ ಮುಳುವಾಗುವ ಸಾಧ್ಯತೆಯಿದೆ.

ಡ್ರಗ್​ ಡೀಲರ್ ಜೊತೆ ನಟಿ ಸಂಜನಾ ಗುಲ್ರಾನಿ ಲಿಂಕ್ ಹೊಂದಿದ್ದಾರೆ. ಹೀಗಾಗಿ ಸಂಜನಾರನ್ನು ಸಿಸಿಬಿಗೆ ಕರೆತಂದಾಗ ಡ್ರಗ್​ ಪೆಡ್ಲರ್ ಜೊತೆ ನಿಮ್ಮ ನಂಟೇನು? ಡ್ರಗ್​​ ಪೆಡ್ಲರ್ ಅಂತಾ ಗೊತ್ತಿದ್ದೂ ನಿಯಾಜ್ ಹಾಗೂ ರಾಹುಲ್ ಜೊತೆ ಒಡನಾಟವೇಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳುವ ಸಾಧ್ಯತೆಯಿದೆ.

ಸ್ಯಾಂಡಲ್​ವುಡ್ ಡ್ರಗ್​​​ ಡೀಲ್ ಪ್ರಕರಣದಲ್ಲಿ ಸದ್ಯ ನಿಯಾಜ್ ಅಹಮದ್ ಸಿಸಿಬಿ ವಶದಲ್ಲಿದ್ದಾರೆ. ಈತ ಮೂಲತಃ ಕೊಚ್ಚಿಯವನಾಗಿದ್ದು, ಬೆಂಗಳೂರಿಗೆ ಬಂದು ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಇದೇ ವಿಚಾರವಾಗಿ ನಿಯಾಜ್​ನನ್ನು ಬಂಧಿಸಿದ್ದು, ವಿಚಾರಣೆ ವೇಳೆ ನಟಿ ಸಂಜನಾ ಗುಲ್ರಾನಿ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ. ನಟಿ ಸಂಜನಾಗೆ ನಿಯಾಜ್, ರಾಹುಲ್ ಹಾಗು ಪೃಥ್ವಿ ಈ ಮೂರು ಜನರ ಸಾಕ್ಷಿಯೇ ಮುಳುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂದುವರೆದ ಶೋಧ ಕಾರ್ಯ: ನಟಿ ಸಂಜನಾ ಗಲ್ರಾನಿಗೂ ಕಂಟಕವಾಗುತ್ತಾ ಡ್ರಗ್ಸ್​ ಪ್ರಕರಣ?

ಸದ್ಯ ಸಿಸಿಬಿ ಕಚೇರಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಕೂಡ ಆಗಮಿಸಿದ್ದು, ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ ಹಾಗೂ ಇನ್ಸ್​​ಪೆಕ್ಟರ್​ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಂಜನಾ ಗುಲ್ರಾನಿಯನ್ನು ಯಾವ ರೀತಿ ತನಿಖೆ ನಡೆಸಬೇಕು ಅನ್ನೋ ಚರ್ಚೆ ಕೂಡ ಮಾಡಲಾಗಿದೆ.

ABOUT THE AUTHOR

...view details