ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿಯ ಹಣದ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಕೈಗೊಂಡಿದೆ.
11 ಖಾತೆಗಳಿಂದ ಲಕ್ಷಾಂತರ ರೂ. ವರ್ಗಾವಣೆ: 'ಇಡಿ'ಯಿಂದ ನಟಿ ಸಂಜನಾ ವಿಚಾರಣೆ - Sandalwood Drug link case
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ನಟಿ ಸಂಜನಾ ವಿರುದ್ಧ ಅಕ್ರಮ ಹಣದ ವ್ಯವಹಾರ ಮತ್ತು ಹವಾಲ ದಂಧೆ ಪ್ರಕರಣ ದಾಖಲಿಸಿದ ಇಡಿ, ವಿಚಾರಣೆಗೆ ಒಳಪಡಿಸಿದೆ.

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಬೆನ್ನಲ್ಲೇ, ಸಂಜನಾ ವಿರುದ್ಧ ಅಕ್ರಮ ಹಣದ ವ್ಯವಹಾರ ಮತ್ತು ಹವಾಲ ದಂಧೆ ಪ್ರಕರಣ ದಾಖಲಿಸಿದ ಇಡಿ, ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ ಸಂಜನಾ ಬಳಿ 11 ಬ್ಯಾಂಕ್ ಖಾತೆಗಳು ಇರುವುದು ಪತ್ತೆಯಾಗಿದೆ. ಬಂಧಿತಳಾಗುವ ಕೆಲ ದಿನಗಳ ಹಿಂದೆಯಷ್ಟೇ ಈ ಖಾತೆಗಳಿಂದ ಸಂಜನಾ ಹಣ ಡ್ರಾ ಮಾಡಿದ್ದಳು ಎಂದು ತಿಳಿದು ಬಂದಿದೆ.
ಸಂಜನಾಳ ಬ್ಯಾಂಕ್ ಖಾತೆಗೆ ವಿದೇಶದಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ವೇಳೆ ವಿದೇಶಗಳಿಂದ ಹಣ ಜಮಾ ಆಗಿರುವ ವಿಚಾರ ಗೊತ್ತಾಗಿದೆ. ಯಾರೆಲ್ಲಾ ಸಂಜನಾ ಖಾತೆಗೆ ಹಣ ಹಾಕುತ್ತಿದ್ದರು ಮತ್ತು ಎಲ್ಲಿಂದ ಹಾಕುತ್ತಿದ್ದರು ಎಂಬುದರ ಬಗ್ಗೆ ಇಡಿ ತನಿಖೆಗಿಳಿದಿದೆ.