ಕರ್ನಾಟಕ

karnataka

ETV Bharat / state

ಬಂಧನಕ್ಕೂ ಮೊದಲೇ ಸಾಕ್ಷ್ಯ ನಾಶ ಮಾಡಿದ್ರಾ ಸಂಜನಾ..!? - Sanjana Deleted Massage on Mobile

ಡ್ರಗ್​ ನಂಟಿನ ಆರೋಪದಲ್ಲಿ ಬಂಧಿತಳಾಗಿರುವ ನಟಿ ಸಂಜನಾ ಮೊಬೈಲ್​ ಫೋನ್​ನ್ನು ರಿಟ್ರೀವ್ ಮಾಡುವುದು ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸಂಜನಾ ಬಳಸುತ್ತಿದ್ದ ಮೊಬೈಲ್​ ಫೋನ್​ ಐ ಫೋನ್ 11 ಪ್ರೊ ಆಗಿರುವ ಕಾರಣ ಈ ಮೊಬೈಲ್​ನಲ್ಲಿ ಮೆಸೇಜ್, ವಿಡಿಯೋ ಡಿಲಿಟ್ ಮಾಡಿದರೆ ರಿಟ್ರೀವ್ ಮಾಡೋದಕ್ಕೆ ಸಾಧ್ಯವೇ ಇಲ್ಲ ಎನ್ನಲಾಗ್ತಿದೆ.

ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲದ ನಂಟು ಆರೋಪ ಪ್ರಕರಣ
ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲದ ನಂಟು ಆರೋಪ ಪ್ರಕರಣ

By

Published : Sep 9, 2020, 11:20 AM IST

Updated : Sep 9, 2020, 1:12 PM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ಸಿಲುಕಿರುವ ನಟಿ ಸಂಜನಾ ಗಲ್ರಾನಿ ತನಿಖೆಯನ್ನ ಇಂದಿನಿಂದ ತನಿಖಾಧಿಕಾರಿಗಳು ‌ಮತ್ತಷ್ಟು ಚುರುಕುಗೊಳಿಸಿದ್ದಾರೆ.

ನಟಿ ಸಂಜನಾ ತನ್ನ ಮೊಬೈಲ್​ನಲ್ಲಿರುವ ಎಲ್ಲ ಮೆಸೇಜ್​, ವಿಡಿಯೋಗಳನ್ನು ಡಿಲಿಟ್​ ಮಾಡಿದ್ದಾರೆ. ಇದರಿಂದ ಸಂಜನಾ ಮೊಬೈಲ್​ ಫೋನ್​ನ್ನು ರಿಟ್ರೀವ್ ಮಾಡುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸಂಜನಾ ಬಳಸುತ್ತಿದ್ದ ಮೊಬೈಲ್​ ಫೋನ್​ ಐ ಫೋನ್ 11 ಪ್ರೊ ಆದ ಕಾರಣ ಈ ಮೊಬೈಲ್​ನಲ್ಲಿ ಮೆಸೇಜ್, ವಿಡಿಯೋ ಡಿಲಿಟ್ ಮಾಡಿದರೆ ರಿಟ್ರೀವ್ ಮಾಡೋದಕ್ಕೆ ಅಸಾಧ್ಯ ಎನ್ನಲಾಗ್ತಿದೆ. ಹೀಗಾಗಿ ಸದ್ಯ ಮಡಿವಾಳದಿಂದ ಹೈದರಾಬಾದ್​ಗೆ ಮೊಬೈಲ್​ನ್ನು ಕಳುಹಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು,‌ ನಟಿ ಸಂಜನಾ ಪೋಷಕರು ಮಗಳು ಬಂಧನವಾದರು ಕೂಡ ನಿನ್ನೆ ಹೊರಟು ಹೋದವರು ಮತ್ತೆ ರಾಜ್ಯ ಮಹಿಳಾ ಸಾಂತ್ವನ ನಿಲಯ ಕೇಂದ್ರದತ್ತ ಬಂದಿಲ್ಲ. ಪೋಷಕರು ಇಂದಿರಾನಗರದ ಬಳಿಯಿರುವ ಮನೆ ಬಾಗಿಲು ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ.

ಸಂಜನಾರನ್ನ ಮಡಿವಾಳದ ಎಫ್​ಎಸ್​ಎಲ್ ಕೇಂದ್ರಕ್ಕೆ ಕರೆದೊಯ್ಯುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹಾಗೆ ಮತ್ತೊಂದೆಡೆ ಸಿಸಿಬಿ ಇನ್​ಸ್ಪೆಕ್ಟರ್ ಅಂಜುಮಾಲಾ ಅವರು ಟೀಂ ಸಾಂತ್ವನ ಕೇಂದ್ರಕ್ಕೆ ಆಗಮಿಸಿದ್ದಾರೆ.

Last Updated : Sep 9, 2020, 1:12 PM IST

ABOUT THE AUTHOR

...view details