ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸಸೌಧ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಶಕ್ತಿಸೌಧದಲ್ಲಿ ಇಂದೂ ಕೂಡ ಸ್ಯಾನಿಟೈಸಿಂಗ್ ಕಾರ್ಯ ಮುಂದುವರೆದಿದೆ.
ಕೊರೊನಾ ಮುಂಜಾಗ್ರತೆ: ಶಕ್ತಿಸೌಧದಲ್ಲಿ ಮುಂದುವರಿದ ಸ್ಯಾನಿಟೈಸಿಂಗ್ ಕಾರ್ಯ - ವಿಧಾನಸೌಧ ಸುದ್ದಿ
ವಿಕಾಸಸೌಧವನ್ನು ಸ್ಯಾನಿಟೈಸ್ ಮಾಡಿದ ಹಿನ್ನೆಲೆ ಶುಕ್ರವಾರ ಒಂದು ದಿನ ಸಂಪೂರ್ಣವಾಗಿ ಮುಚ್ಚಲಾಗಿತ್ತು. ನಾಳೆಯಿಂದ ಶಕ್ತಿಸೌಧದಲ್ಲಿ ಎಂದಿನಂತೆ ಕಾರ್ಯಚಟುವಟಿಕೆ ನಡೆಯಲಿದೆ. ಆದರೆ ಇನ್ನಷ್ಟು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ನಿರ್ಧರಿಸಲಾಗಿದೆ.
![ಕೊರೊನಾ ಮುಂಜಾಗ್ರತೆ: ಶಕ್ತಿಸೌಧದಲ್ಲಿ ಮುಂದುವರಿದ ಸ್ಯಾನಿಟೈಸಿಂಗ್ ಕಾರ್ಯ Sanitizing work in the Shakti Soudha at Bengalore](https://etvbharatimages.akamaized.net/etvbharat/prod-images/768-512-7708873-876-7708873-1592728092655.jpg)
ನಿನ್ನೆ ಸಂಜೆ ವಿಧಾನಸೌಧದ ಪ್ರತಿ ಕೊಠಡಿಗಳು, ಕಾರಿಡಾರ್ ಗಳ ಸ್ಯಾನಿಟೈಸಿಂಗ್ ಕಾರ್ಯ ಆರಂಭವಾಗಿತ್ತು. ಅದರಂತೆ ಇಂದೂ ಸ್ಯಾನಿಟೈಸಿಂಗ್ ಕಾರ್ಯ ಮುಂದುವರಿದಿದೆ. ಗುರುವಾರ ಹಾಗೂ ಶುಕ್ರವಾರ ವಿಕಾಸಸೌಧವನ್ನು ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಲಾಗಿತ್ತು. ಇಂದು ವಿಧಾನಸೌಧವನ್ನು ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಿ ಶುಚಿಗೊಳಿಸಲಾಗುತ್ತಿದೆ.