ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್‌ : ಮೆಡಿಕಲ್‌ ಶಾಪ್‌ಗಳಲ್ಲಿ ಸ್ಯಾನಿಟೈಸರ್ ಬೆಲೆ ವಿಪರೀತ ಹೆಚ್ಚಳ! - sanitizers-rate-increased

ಸದ್ಯ ಸ್ಯಾನಿಟೈಸರ್ ಬೆಲೆ ನೋಡಿ ಜನ ಸುಸ್ತಾಗಿದ್ದಾರೆ. ಆರೋಗ್ಯ ಇಲಾಖೆ ಕೂಡ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಷ್ಟು ದಿನ ಮಾಸ್ಕ್ ಮಾಫಿಯಾ ನಡೆಸಿದ ಮೆಡಿಕಲ್‌ ಶಾಪ್‌ಗಳು ಈಗ ಸ್ಯಾನಿಟೈಸರ್ ಮಾಫಿಯಾ ನಡೆಸುತ್ತಿವೆ. ಜನರನ್ನು ಮತ್ತಿಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ.

sanitizers-rate-increased-due-to-corona-virus-effect
ಕೊರೊನಾ ಎಫೆಕ್ಟ್

By

Published : Mar 10, 2020, 5:17 PM IST

ಬೆಂಗಳೂರು :ದೇಶದಲ್ಲೆಡೆ ಜನ ಕೊರೊನಾ ಆತಂಕದಲ್ಲಿದ್ದಾರೆ. ಹೀಗಾಗಿ ಒಂದೆಡೆ ಮಾಸ್ಕ್‌ಗಳ ರೇಟ್ ಜಾಸ್ತಿಯಾಗ್ತಿದ್ರೆ, ಅದರ ಬೆನ್ನಲ್ಲೇ ಸ್ಯಾನಿಟೈಸರ್ ಬೆಲೆಯೂ ಕೂಡ ಜಾಸ್ತಿ ಮಾಡಿವೆ ಕಂಪನಿಗಳು. ಸದ್ಯ ಆಗಾಗ ಕೈ ಶುದ್ಧವಾಗಿಟ್ಟುಕೊಳ್ಳಿ ಎಂದು ಆರೋಗ್ಯ ಇಲಾಖೆ ಸೂಚನೆಯಿಂದ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಮೆಡಿಕಲ್ ಶಾಪ್ ಮತ್ತು ಫಾರ್ಮ್‌ ಕಂಪನಿಗಳು ಒಂದೆಡೆ ರೇಟ್ ಜಾಸ್ತಿ ಮಾಡಿದ್ರೆ, ಸಾಕಷ್ಟು ಮೆಡಿಕಲ್ ಶಾಪ್‌ಗಳಲ್ಲಿ ಸ್ಯಾನಿಟೈಸರ್‌ಗಳೇ ಖಾಲಿಯಾಗಿವೆ.

ಸ್ಯಾನಿಟೈಸರ್ ನೇಮ್ ಹಳೆಯ ದರ ಹೊಸ ದರ
ಹಿಮಾಲಯ 100 ಎಂಎಲ್ 79 ರೂ. 89.5 ರೂ.
ಪ್ರೋನೊಸೈಟ್ 500 ಎಂಎಲ್ 250 525
ಜೂಸಿ ಜೂನಿಯರ್ 50ಎಂಎಲ್ 45 80
ಡೆಟಾಲ್ 100 ಎಂಎಲ್ 90 90
ಸ್ಟೇರ್ಲಿಮ್ 100 ಎಂಎಲ್ 156 179

ಸದ್ಯ ಸ್ಯಾನಿಟೈಸರ್ ಬೆಲೆ ನೋಡಿ ಜನ ಸುಸ್ತಾಗಿದ್ದಾರೆ. ಆರೋಗ್ಯ ಇಲಾಖೆ ಕೂಡ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಷ್ಟು ದಿನ ಮಾಸ್ಕ್ ಮಾಫಿಯಾ ನಡೆಸಿದ ಮೆಡಿಕಲ್‌ ಶಾಪ್‌ಗಳು ಈಗ ಸ್ಯಾನಿಟೈಸರ್ ಮಾಫಿಯಾ ನಡೆಸುತ್ತಿವೆ. ಜನರನ್ನು ಮತ್ತಿಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ.

ABOUT THE AUTHOR

...view details