ಕರ್ನಾಟಕ

karnataka

ETV Bharat / state

ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ಅಕುಲ್ ಬಾಲಾಜಿ, ಸಂತೋಷ್​, ಯುವರಾಜ್​! - ನಟ ಅಕುಲ್​ ಬಾಲಾಜಿ

ಸ್ಯಾಂಡಲ್​​ವುಡ್​ನ ಡ್ರಗ್ಸ್​ ನಂಟು ಆರೋಪ ಪ್ರಕರಣ ಸಂಬಂಧ ನಿರೂಪಕ, ನಟ ಅಕುಲ್ ಬಾಲಾಜಿ ಸೇರಿ ಮೂವರು ಪ್ರಭಾವಿಗಳಿಗೆ ಸಿಸಿಬಿ ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.

Sandlwood drugs case
Sandlwood drugs case

By

Published : Sep 19, 2020, 6:21 AM IST

Updated : Sep 19, 2020, 6:58 AM IST

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ, ಖ್ಯಾತ ನಿರೂಪಕ ಅಕುಲ್ ಬಾಲಾಜಿ,ನಟ ಸಂತೋಷ್ ಕುಮಾರ್​ ಹಾಗೂ ಮಾಜಿ ಶಾಸಕ ಆರ್​ವಿ ದೇವರಾಜ್ ಮಗ ಯುವರಾಜ್​ ಇಂದು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಲಿದ್ದಾರೆ. ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಈಗಾಗಲೇ ನಟಿ ರಾಗಿಣಿ, ಸಂಜನಾ, ಪ್ರತೀಕ್ ಶೆಟ್ಟಿ, ವೈಭವ್ ಜೈನ್ ಹಾಗೂ ಇತರೆ ಆರೋಪಿಗಳಿಂದ ಮಾಹಿತಿ ಪಡೆದಿರುವ ಸಿಸಿಬಿ ಪೊಲೀಸರು, ಇಂದು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಈ ಮೂವರ ವಿಚಾರಣೆ ನಡೆಸಲಿದ್ದಾರೆ. ಇದರ ಮಧ್ಯೆ ಅಕುಲ್​ ಬಾಲಾಜಿ ಹೈದರಾಬಾದ್​ನಲ್ಲಿರುವ ಕಾರಣ ಬೆಳಗ್ಗೆ 11ಗಂಟೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಮೂವರ ಬಳಿಯಿಂದ ಮೊಬೈಲ್​​ಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಎಫ್ಎಸ್ಎಲ್ ಕಚೇರಿಗೆ ರವಾನೆ ಮಾಡಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಐಂದ್ರಿತಾ ಹಾಗೂ ದಿಗಂತ್ ವಿಚಾರಣೆ ನಡೆಸಿದ್ದರು. ಈ ವೇಳೆ ಅಕುಲ್​ ಬಾಲಾಜಿ ಮತ್ತು ಸಂತೋಷ್ ಹೆಸರು ಪ್ರಸ್ತಾಪವಾಗಿದೆ. ಪ್ರತೀಕ್ ಶೆಟ್ಟಿ ನಡೆಸಿದ್ದ ಪಾರ್ಟಿಗಳಲ್ಲಿ ಯಾರೆಲ್ಲಾ ಭಾಗಿಯಾಗ್ತಿದ್ರು ಅನ್ನೋ ಕುರಿತಂತೆ ಅಧಿಕಾರಿಗಳಿಗೆ ದಿಗಂತ್ - ಐಂದ್ರಿತಾ ಮಾಹಿತಿ ನೀಡಿದ್ದರು ಎನ್ನಲಾಗ್ತಿದೆ.

Last Updated : Sep 19, 2020, 6:58 AM IST

ABOUT THE AUTHOR

...view details