ಕರ್ನಾಟಕ

karnataka

ETV Bharat / state

ಡ್ರಗ್ಸ್​​​ ಪ್ರಕರಣದ ತನಿಖೆ ಚುರುಕು: ಸಿಸಿಬಿ ಕಚೇರಿಗೆ ತನಿಖಾಧಿಕಾರಿ ಸಂದೀಪ್ ಪಾಟೀಲ್ ಭೇಟಿ - ccb office

ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದ್ದಾರೆ. ಮಧ್ಯಾಹ್ನದ ಬಳಿಕ ರಾಗಿಣಿ ವಿಚಾರಣೆಯನ್ನು ಖುದ್ದಾಗಿ ಸಂದೀಪ್ ಪಾಟೀಲ್ ಅವರೇ ಮಾಡಲಿದ್ದಾರೆ.

Sandeep Patil visits CCB office
ಡ್ರಗ್ ಮಾಫಿಯಾ ತನಿಖೆ ಚುರುಕು; ಸಿಸಿಬಿ ಕಚೇರಿಗೆ ತನಿಖಾಧಿಕಾರಿ ಸಂದೀಪ್ ಪಾಟೀಲ್ ಭೇಟಿ

By

Published : Sep 5, 2020, 1:09 PM IST

ಬೆಂಗಳೂರು:ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಬಳಕೆ ಆರೋಪ​ ಪ್ರಕರಣದ ವಿಚಾರಣೆ ಬಿರುಸಿನಿಂದ ಸಾಗಿದ್ದು, ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದ್ದಾರೆ.

ಸಿಸಿಬಿ ಕಚೇರಿಗೆ ತನಿಖಾಧಿಕಾರಿ ಸಂದೀಪ್ ಪಾಟೀಲ್ ಭೇಟಿ

ಖುದ್ದಾಗಿ ಆಯುಕ್ತರೇ ಭೇಟಿಯಾಗಿ ರಾಗಿಣಿ‌ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ರಾಗಿಣಿ ಕುಟುಂಬಸ್ಥರು ಸಿಸಿಬಿ ಕಚೇರಿಯಲ್ಲಿರುವ ಕಾರಣ ಅವರ ಬಳಿ ಕೂಡ ಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ನಿನ್ನೆ ದಾಳಿ ಸಂದರ್ಭ ರಾಗಿಣಿ‌ ಮನೆಯಲ್ಲಿ ಸಿಗರೇಟ್​ಗಳು ಪತ್ತೆಯಾಗಿದ್ದವು. ಹೀಗಾಗಿ ‌ಮನೆಯಲ್ಲಿ ರಾಗಿಣಿ ಚಲನ-ವಲನಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮಧ್ಯಾಹ್ನದ ಬಳಿಕ ರಾಗಿಣಿ ವಿಚಾರಣೆಯನ್ನು ಖುದ್ದಾಗಿ ಸಂದೀಪ್ ಪಾಟೀಲ್ ಅವರೇ ಮಾಡಲಿದ್ದಾರೆ.

ಯಾವೆಲ್ಲಾ ಲಿಂಕ್ ಮುಂದಿಟ್ಟುಕೊಂಡು ವಿಚಾರಣೆ ನಡೆಸಬೇಕೆಂಬ ಪ್ರಶ್ನೆಗಳು ಮತ್ತು ಸಾಕ್ಷಿ ಆಧಾರದ‌ ಮೇರೆಗೆ ತನಿಖೆ ನಡೆಯಲಿದೆ. ರಾಗಿಣಿ ಮನೆಯ ಕೋಣೆಯಲ್ಲಿ ಗಾಂಜಾ ಮಿಶ್ರಿತ ಸಿಗರೇಟ್ ಸಿಕ್ಕಿತ್ತು. ಹೀಗಾಗಿ ಅದರ ಆಧಾರದ ಮೇರೆಗೆ ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details