ಕರ್ನಾಟಕ

karnataka

ETV Bharat / state

ಟಾಲಿವುಡ್​ಗೆ ಹೋಗಲು ನನಗೆ ಕಾರ್ಪೆಟ್ ಹಾಸಿಕೊಟ್ಟಿದ್ದೇ ಸ್ಯಾಂಡಲ್​ವುಡ್​ ಎಂದ ಡಿಂಪಲ್​ ಕ್ವೀನ್​ - The movie starring Rachita Ram is Super Machchi

ಕನ್ನಡದ ಖ್ಯಾತ ನಟಿ ರಚಿತಾ ರಾಮ್ ತೆಲುಗು ನಟ ಚಿರಂಜೀವಿ ಅಳಿಯ ಕಲ್ಯಾಣ್ ಜೊತೆ 'ಸೂಪರ್ ಮಚ್ಚಿ' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಹಾಗೂ ಟಾಲಿವುಡ್ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾರೆ.

Sandalwood put carpet for tollywood: Rachita ram
ಟಾಲಿವುಡ್​ಗೆ ಹೋಗಲು ನನಗೆ ಕಾರ್ಪೆಟ್ ಹಾಸಿಕೊಟ್ಟಿದ್ದೇ ಸ್ಯಾಂಡಲ್​ವುಡ್​ ಎಂದ ಡಿಂಪಲ್​ ಕ್ವೀನ್​

By

Published : Feb 17, 2020, 8:41 AM IST

ಕನ್ನಡದ ಖ್ಯಾತ ನಟಿ ರಚಿತಾ ರಾಮ್ ತೆಲುಗು ನಟ ಚಿರಂಜೀವಿ ಅಳಿಯ ಕಲ್ಯಾಣ್ ಜೊತೆ 'ಸೂಪರ್ ಮಚ್ಚಿ' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಹಾಗೂ ಟಾಲಿವುಡ್ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಟಾಲಿವುಡ್​ಗೆ ಹೋಗಲು ನನಗೆ ಕಾರ್ಪೆಟ್ ಹಾಸಿಕೊಟ್ಟಿದ್ದೇ ಸ್ಯಾಂಡಲ್​ವುಡ್​ ಎಂದ ಡಿಂಪಲ್​ ಕ್ವೀನ್​

ಸೂಪರ್ ಮಚ್ಚಿ ಚಿತ್ರ ತುಂಬಾನೆ ಚೆನ್ನಾಗಿ ಮೂಡಿ ಬರ್ತಿದೆ. ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಅಗಲಿದೆ. ನನಗೆ ತೆಲುಗು ಭಾಷೆ ಹೊಸದು, ಅಲ್ಲಿನ ಜನರು, ಇಂಡಸ್ಟ್ರಿ ಎಲ್ಲವೂ ಹೊಸದೆ. ಆದರೆ, ನಾನು ಬೇರೆ ಇಂಡಸ್ಟ್ರಿಗೆ ಕಾಲಿಟ್ಟಿರುವುದು ನನಗೆ ಖುಷಿ ಕೊಟ್ಟಿದೆ.

ಇನ್ನೂ, ನಾನು ಬೇರೆ ಭಾಷೆಯ ಚಿತ್ರದಲ್ಲಿ ನಟಿಸೋದಕ್ಕೆ ನನಗೆ ಕಾರ್ಪೆಟ್ ಹಾಸಿದ್ದು ನನ್ನ ಕನ್ನಡ ಚಿತ್ರರಂಗ. ನಾನು ಒಂದೆರಡು ವರ್ಷ ಕನ್ನಡ ಚಿತ್ರರಂಗದಲ್ಲಿ ದುಡಿದು ಬೇರೆ ಭಾಷೆಗೆ ಹೋದವಳಲ್ಲ. ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿಯಾಗಿ ಏಳು ವರ್ಷಗಳನ್ನು ಪೂರೈಸಿ ನಂತರ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದೇನೆ. ಅಲ್ಲದೇ, ಟಾಲಿವುಡ್ ಮಂದಿ ನನ್ನ ಪ್ರೊಫೈಲ್ ನೋಡಿ ರಚಿತಾ, ಕನ್ನಡದ ಎಲ್ಲಾ ಟಾಪ್ ನಟರ ಜೊತೆ ಆಕ್ಟ್ ಮಾಡಿ ತೆಲುಗು ಇಂಡಸ್ಟ್ರಿಗೆ ಆಪ್ಟ್ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಏನೇ ಆಗಲಿ ನಾನು ಅದನ್ನು ಉಳಿಸಿಕೊಳ್ಳುತ್ತೇನೆ. ನನಗೆ ಸಕ್ಸಸ್ ಸಿಕ್ಕಿದ್ರೆ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಗರಿ ಹೆಚ್ಚಿದಂತೆ ಎಂದರು.

ABOUT THE AUTHOR

...view details