ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಸಂಜನಾ ಮತ್ತು ರಾಗಿಣಿ ಅಧಿಕಾರಿಗಳೊಡನೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ.
ನಟಿಮಣಿಯರಿಬ್ಬರು ಮಾದಕ ಲೋಕದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಚ್ಚಿಡದಿರುವ ಕಾರಣ ನಿನ್ನೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮಡಿವಾಳದ ಎಫ್ಎಸ್ಎಲ್ ಕಚೇರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಎಫ್ಎಸ್ಎಲ್ನಲ್ಲಿ ಇಬ್ಬರು ನಟಿಯರು ಕೂಗಾಡಿ ಅಧಿಕಾರಿಗಳ ವಿರುದ್ಧವೇ ಕಿರುಚಾಡಿದ ನಟಿ ರಾಗಿಣಿ ಹಾಗೂ ಸಂಜನಾ ನಮ್ಮನ್ಯಾಕೆ ಇಲ್ಲಿಗೆ ಕರೆ ತಂದಿದ್ದೀರಾ ಎಂದು ಅಧಿಕಾರಿಗಳೊಡನೆ ವಾಗ್ವಾದ ನಡೆಸಿದ್ದರು.
ಇನ್ನು ಎಷ್ಟೇ ಕಿರುಚಾಡಿದ್ರೂ ತಮ್ಮ ಕೆಲಸ ಮಾಡೋದು ಮಾತ್ರ ಬಿಡದ ಅಧಿಕಾರಿಗಳು, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಬಳಿಕ ಮಡಿವಾಳದ ಎಫ್ಎಸ್ಎಲ್ನಲ್ಲಿ ನುರಿತ ಹೇರ್ ಪೋಲಿಕ್ ಟೆಸ್ಟ್ ತಜ್ಞರಿಂದ ತಲೆ ಕೂದಲು ಶೇಖರಿಸುವ ಕಾರ್ಯ ಮಾಡಿದ್ದಾರೆ.
ಇಬ್ಬರು ನಟಿ ಮಣಿಯರು ಶೋಕಿ ಜೀವನ ತಮ್ಮ ಗ್ಲಾಮರ್ ಕಡೆಗೆ ಬಹಳ ಪ್ರಾಮುಖ್ಯತೆಯನ್ನ ಕೊಟ್ಟಿದ್ರು. ಹೀಗಾಗಿ ತಲೆಯ ಕೂದಲು ಯಾಕೆ ಅಂತ ಕಿರುಚಾಡಿದರು. ಬಳಿಕ ಅಧಿಕಾರಿಗಳ ಸತತ ಎರಡು ಗಂಟೆಗಳ ಪ್ರಯತ್ನದಿಂದ ನಟಿಯರ ತಲೆ ಕೂದಲು ಸಂಗ್ರಹಿಸಿ ಟೆಸ್ಟ್ಗೆ ಕಳುಹಿಸಿದ್ದಾರೆ.
ತಲೆಕೂದಲು ತೆಗೆಯುವಾಗ ಕಿರುಚಾಡಿದ ನಟಿಯರು ಏನಿದು ಹೇರ್ ಪೋಲಿಕ್ ಟೆಸ್ಟ್...?
ಇದು ಡ್ರಗ್ಸ್ ತೆಗೆದುಕೊಂಡಿರುವ ರಿಜಲ್ಟ್ನ್ನು ಕೊಡುತ್ತದೆ. ತಲೆಯ ಮೂರು ಭಾಗಗಳಿಂದ ಅಂದ್ರೆ ಹಣೆಯ ಮೇಲ್ಭಾಗದಲ್ಲಿ, ಬಲ ಮತ್ತು ಎಡ ಕಿವಿಯ ಮೇಲ್ಭಾಗದಲ್ಲಿನ ಬೇರಿನ ಸಮೇತ ತಲೆಗೂದಲನ್ನು ಸಂಗ್ರಹಿಸಲಾಗುತ್ತೆ. ಬಳಿಕ ಡ್ರಗ್ಸ್ ತಪಾಸಣೆ ಬಗ್ಗೆ ಮಾಹಿತಿ ಸಂಗ್ರಹವಾಗುತ್ತೆ.
ಆರು ತಿಂಗಳು ಅಥವಾ ಒಂದು ವರ್ಷದ ಅವಧಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ರೂ ಈ ಟೆಸ್ಟ್ನಿಂದ ಗೊತ್ತಾಗುತ್ತದೆ. ಆದರೆ ಹೇರ್ಪಾಲಿಕಲ್ ಟೆಸ್ಟ್ ರಿಪೋರ್ಟ್ ಬರೋದು ತಡ ಆಗಬಹುದು. ಆದ್ರೆ ಪಕ್ಕಾ ರಿಸಲ್ಟ್ ಬರುತ್ತೆ. ಹೇರ್ ಪೋಲಿಕ್ ಟೆಸ್ಟ್ ಮಾಡೋ ತಂತ್ರಜ್ಞಾನ ನಮ್ಮ ರಾಜ್ಯದಲ್ಲಿಯೇ ಇಲ್ಲ. ಇದಕ್ಕಾಗಿ ಹೈದರಾಬಾದ್, ತಿರುವನಂತಪುರಂ, ಅಹಮದಾಬಾದ್ನ ಎಫ್ಎಸ್ಎಲ್ ಕೇಂದ್ರಕ್ಕೆ ಕಳುಹಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸದ್ಯ ಮೂರು ಎಫ್ಎಸ್ಎಲ್ ಕೇಂದ್ರಗಳ ನಿರ್ದೇಶಕರೊಂದಿಗೆ ಸಿಸಿಬಿ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಎಲ್ಲಿ ಅನುಮತಿ ಸಿಗುತ್ತೋ ಅಲ್ಲಿಗೆ ನಟಿಯರ ಕೂದಲನ್ನು ಕಳುಹಿಸಲಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ಕೇಸ್ ಒಂದರಲ್ಲಿ ಕೂದಲು ಸಂಗ್ರಹಿಸಿರೋದು ಅನ್ನೋ ವಿಚಾರ ಬಯಲಾಗಿದೆ.
ಸದ್ಯ ಹೇರ್ ಪೋಲಿಕ್ ಟೆಸ್ಟ್ನಿಂದ ನಟಿಯರಿಗೆ ಸಂಕಷ್ಟ ಎದುರಾಗುತ್ತದೆ. ನಟಿಯರ ನಡವಳಿಕೆ ನೋಡಿದ್ರೆ ಸಾಕಷ್ಟು ಅನುಮಾನ ಮೂಡುತ್ತಿದೆ. ಹೇರ್ ಪೋಲಿಕ್ ಟೆಸ್ಟ್ ರಿಪೋರ್ಟ್ ಬರೋಕೆ ಒಂದು ತಿಂಗಳು ಬೇಕಾಗಬಹುದು. ಒಂದು ವೇಳೆ ನಟಿಯರ ಹೇರ್ ಪೋಲಿಕ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ.