ಕರ್ನಾಟಕ

karnataka

ETV Bharat / state

ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್: ರಾಗಿಣಿ ಜೈಲಿಗಾ, ಸಿಸಿಬಿ ಕಸ್ಟಡಿಗಾ? - ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್ 2020 ಸುದ್ದಿ,

ತುಪ್ಪದ ಹುಡುಗಿಗೆ ಸದ್ಯಕ್ಕೆ ರಿಲೀಫ್ ಇಲ್ಲ. ಕೆಲವೇ ಕ್ಷಣಗಳಲ್ಲಿ ರಾಗಿಣಿ ಜೈಲಿಗಾ ಅಥವಾ ಸಿಸಿಬಿ ಕಸ್ಟಡಿಗಾ ಎಂಬುದು ನಿರ್ಧಾರವಾಗಲಿದೆ.

Ragini go for jail or CCB custody, Ragini news, Ragini latest news, Sandalwood Drugs case, Sandalwood Drugs case 2020, Sandalwood Drugs case 2020 news, ರಾಗಿಣಿ ಜೈಲಿಗಾ ಅಥವಾ ಸಿಸಿಬಿ ಕಸ್ಟಡಿಗಾ, ರಾಗಿಣಿ ಸುದ್ದಿ, ರಾಗಿಣಿ ಡ್ರಗ್ಸ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​, ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್ 2020, ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್ 2020 ಸುದ್ದಿ,
ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್

By

Published : Sep 11, 2020, 2:18 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರಾಗಿಣಿ ದ್ವಿವೇದಿಗೆ ಸದ್ಯದ ಮಟ್ಟಿಗೆ ನ್ಯಾಯಾಲಯದಿಂದ ರಿಲೀಫ್ ಸಿಕ್ಕಿಲ್ಲ.

ನಟಿ ರಾಗಿಣಿ ಪರ ವಕೀಲರು ಸಲ್ಲಿಸಿರುವ ಅರ್ಜಿ ಇದೇ ಸೆಪ್ಟೆಂಬರ್ 14ಕ್ಕೆ ಮುಂದೂಡಿಕೆಯಾಗಿದೆ. ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಇರುವ ಎನ್​ಡಿಪಿಎಸ್ ವಿಶೇಷ ಕೋರ್ಟ್​ಗೆ ಹೊಸದಾಗಿ ನಿನ್ನೆ ಜಾಮೀನು ಕೋರಿ ಮುಂಬೈ ಮೂಲದ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಇಂದು ಸಿಸಿಬಿ ಪೊಲೀಸರು ಆಕ್ಷೇಪಣೆ ಹಾಕೋಕ್ಕೆ ನೋಟಿಸ್ ಕೊಟ್ಟು ಸೆಪ್ಟೆಂಬರ್ 14ಕ್ಕೆ ವಿಚಾರಣೆ ಮುಂದೂಡಿದೆ. ಹೀಗಾಗಿ ರಾಗಿಣಿಗೆ ಸದ್ಯಕ್ಕೆ ಯಾವುದೇ ರೀತಿಯಾದ ರಿಲೀಫ್ ಅನ್ನೋದು ಇಲ್ಲ.

ಮತ್ತೊಂದೆಡೆ ಇಂದಿಗೆ ರಾಗಿಣಿ ಸಿಸಿಬಿ ಕಸ್ಟಡಿ ಮುಕ್ತಾಯವಾಗುತ್ತಿದ್ದು, ನಟಿ ರಾಗಿಣಿ ಸಿಸಿಬಿ ಕಸ್ಟಡಿಗಾ ಅಥವಾ ಪರಪ್ಪನ ಅಗ್ರಹಾರ ಜೈಲಿಗಾ ಅನ್ನೋ ವಿಚಾರ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

ಸದ್ಯ ಸಿಸಿಬಿ ಪೊಲೀಸರು‌ ನ್ಯಾಯಾಧೀಶರ ಎದುರು ನಟಿಯನ್ನು ಹಾಜರುಪಡಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.

ABOUT THE AUTHOR

...view details