ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಿಂದ ಈಗ ರೌಡಿಶೀಟರ್ಗಳಿಗೂ ಕಂಟಕ ಶುರುವಾಗಿದೆ.
ಯಾಕಂದ್ರೆ ಸೈಲೆಂಟಾಗಿ ತನಿಖೆಗೆ ಇಳಿದಿರುವ ಐಎಸ್ಡಿ, ಸದ್ಯ ರೌಡಿಗಳ ಬೆನ್ನತ್ತಿದೆ. ಐಎಸ್ಡಿ ಕೇರಳ ಮೂಲದ ಇಬ್ಬರು ಪೆಡ್ಲರ್ಗಳನ್ನ ಬಂಧಿಸಿ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವಾರು ರೋಚಕ ವಿಚಾರಗಳು ಬಯಲಾಗಿವೆ. ಹೀಗಾಗಿ ಜ್ಞಾನ ಭಾರತಿ ರೌಡಿಶೀಟರ್ ರಜನಿ ಅಲಿಯಾಸ್ ರೌಡಿ ರಾಣಿಯ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ರೌಡಿ ರಾಣಿ ಬೆನ್ನತ್ತಿದೆ ಐಎಸ್ಡಿ ತಂಡ ಐಎಸ್ಡಿ ತನಿಖೆ ವೇಳೆ ರೌಡಿಶೀಟರ್ ರಾಣಿ ಕಿರುತೆರೆ ನಟ-ನಟಿಯರಿಗೆ ಮಾದಕ ವಸ್ತು ನೀಡುತ್ತಿದ್ದ ವಿಚಾರ ಬಯಲಾಗಿದೆ. ಸದ್ಯ ಇದೇ ಆಧಾರದ ಮೇಲೆ ರಾಣಿಯ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ನಗರದ ಎಲ್ಲಾ ರೌಡಿಶೀಟರ್ಗಳ ಜೊತೆ ನಿರಂತರ ಸಂಪರ್ಕ ಇದ್ದು, ಕೆಲ ರೌಡಿಗಳಿಗೆ ಮನಸ್ತಾಪ ಉಂಟು ಮಾಡಿ ಕೊಲೆಗೆ ಸ್ಕೆಚ್ ಹಾಕ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ರಾಣಿ ಮಾದಕ ವಸ್ತು ತೆಗೆದುಕೊಳ್ತಿರುವ ವಿಡಿಯೋ ಐಎಸ್ಡಿಗೆ ಸಿಕ್ಕಿದೆ. ಈ ವಿಡಿಯೋ ಆಧರಿಸಿ ಐಎಸ್ಡಿ ತನಿಖೆ ನಡೆಸುತ್ತಿದೆ. ಹಾಗೆಯೇ ಪೆಡ್ಲರ್ಗಳು ಕೆಲ ಮಾಹಿತಿ ಬಿಚ್ಚಿಟ್ಟಿದ್ದು, ಕಿರುತೆರೆ ನಟ-ನಟಿಯರಿಗೆ ಮಾದಕ ವಸ್ತು ನೀಡುತ್ತಿದ್ದ ಆರೋಪ ಹಾಗೆಯೇ ಕೆಲ ಕಿರುತೆರೆ ನಟಿಯರ ವಿಚಾರಣೆ ಮಾಡಿದಾಗ ಈಕೆಯ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ತಲೆಮರೆಸಿಕೊಂಡಿರುವ ರೌಡಿ ರಾಣಿಗಾಗಿ ಐಎಸ್ಡಿ ತಂಡ ಹುಡುಕಾಟ ನಡೆಸ್ತಿದೆ.
ಇನ್ನು ಈಕೆಯ ಮೇಲೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ 10ಕ್ಕೂ ಹೆಚ್ಚು ಕೊಲೆ, ಕೊಲೆ ಯತ್ನ, ಬೆದರಿಕೆ ಪ್ರಕರಣಗಳಿವೆ. ಹಲವಾರು ಠಾಣೆಗಳಲ್ಲೂ ಈಕೆಯ ವಿರುದ್ಧ ಕೇಸ್ಗಳಿವೆ. ಸದ್ಯ ಈಕೆ ಮಾದಕ ವಸ್ತು ಸೇವನೆ ಮಾಡುತ್ತಿದ್ದಾಳೆ ಎನ್ನಲಾದ ದೃಶ್ಯ ಹಾಗೂ ಪೆಡ್ಲರ್ ಹೇಳಿದ ಮಾಹಿತಿ ಮೇರೆಗೆ ಐಎಸ್ಡಿ ತನಿಖೆ ಮುಂದುವರೆಸಿದೆ.