ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ಬೆಂಗಳೂರು ಪೊಲೀಸರಿಂದ ಕುಖ್ಯಾತ ಪೆಡ್ಲರ್​​​​ ಅರೆಸ್ಟ್​​​​​ - ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ 2020,

ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕುಖ್ಯಾತ ಪೆಡ್ಲರ್​ನೊಬ್ಬನನ್ನು ಬಂಧಿಸಿದ್ದಾರೆ.

Drug peddler arrest, Drug peddler arrest in Bangalore, Sandalwood drugs case, Sandalwood drugs case 2020, Sandalwood drugs case 2020 news, ಡ್ರಗ್​ ಪೆಡ್ಲರ್​ ಬಂಧನ, ಬೆಂಗಳೂರಿನಲ್ಲಿ ಡ್ರಗ್​ ಪೆಡ್ಲರ್​ ಬಂಧನ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ 2020, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ 2020 ಸುದ್ದಿ,
ಕುಖ್ಯಾತ ಪೆಡ್ಲರ್ ಬಂಧಿಸಿದ ಬೆಂಗಳೂರು ಪೊಲೀಸರು

By

Published : Oct 27, 2020, 9:13 AM IST

ಬೆಂಗಳೂರು:ಸ್ಯಾಂಡಲ್​​ವುಡ್​​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ‌ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಹೌದು, 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಿಗ್ ಡ್ರಗ್ಸ್​ ಪೆಡ್ಲರ್​ನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ. ‌ಕುಖ್ಯಾತ ಬಿಗ್ ಡ್ರಗ್ ಪೆಡ್ಲರ್ "VT" ಬಂಧಿತ ಆರೋಪಿ.

ಈತ ನೈಜೀರಿಯಾ ದೇಶದವನಾಗಿದ್ದು, ಬ್ಯುಸಿನೆಸ್​ ಪಾಸ್​​​ಪೋರ್ಟ್​ನಿಂದ ಬೆಂಗಳೂರಿಗೆ ಬಂದಿದ್ದ. ಆದರೆ ಪಾಸ್​​ಪೋರ್ಟ್ ಅವಧಿ ಮುಗಿದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿ ಬಹುದೊಡ್ಡ ಡ್ರಗ್ಸ್​ ನೆಟ್​ವರ್ಕ್ ಆಪರೇಟ್ ಮಾಡ್ತಿದ್ದ. ತನ್ನ ಗಿರಾಕಿಗಳಿಗೆ ಪೆಡ್ಲರ್ ಮುಖಾಂತರ ಪೆಡ್ಲಿಂಗ್ ಮಾಡಿ ಅಧಿಕ ಹಣ ಗಳಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿ "VT"ಯ ಡ್ರಗ್ಸ್​ ಡೀಲ್ ಆಪರೇಟ್ ಸಿಸ್ಟಮ್ ರಿವೀಲ್...

ಈತ ಬರೋಬ್ಬರಿ 42 ಜನ ಡ್ರಗ್ಸ್​ ಪೆಡ್ಲರ್​ಗಳ ಬಹುದೊಡ್ಡ ನೆಟ್​ವರ್ಕ್ ಹೊಂದಿ ರಾಜಕಾರಣಿಗಳ ಮಕ್ಕಳು, ಸಿನಿಮಾ ನಟ-ನಟಿಯರು, ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್, ಮೆಡಿಕಲ್, ಬ್ಯುಸಿನೆಸ್ ಕಾಲೇಜುಗಳಿಗೆ ಡ್ರಗ್ಸ್​​ ಪೂರೈಕೆ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗೆ ಈ ಕಾಲೇಜ್​ಗಳು ಡ್ರಗ್ಸ್​ ಡೀಲ್ ಅಡ್ಡವಾಗಿದ್ದು, ಕಳೆದ 7 ವರ್ಷಗಳಿಂದ ಡ್ರಗ್ಸ್​ ಡೀಲ್ ನಡೆಸ್ತಿದ್ದ ಎಂದು ತಿಳಿದು ಬಂದಿದೆ.

ಅಷ್ಟು ಮಾತ್ರವಲ್ಲದೆ ಲಾಕ್​ಡೌನ್ ವೇಳೆ ‘VT’ಯ ಡ್ರಗ್ಸ್​​ಗೆ ಸಖತ್ ಡಿಮ್ಯಾಂಡ್ ಇದ್ದು, ಬಂಧಿತ ಡ್ರಗ್ಸ್​ ಪೆಡ್ಲರ್​ಗಳಾದ ಲೂಮ್ ಪೆಪ್ಪರ್ ಮತ್ತು ಪ್ರತೀಕ್ ಶೆಟ್ಟಿಗೆ ಲಿಂಕ್ ಹೊಂದಿ ಇವರ ಮೂಲಕ ಕೂಡ ನಟಿ ರಾಗಿಣಿ, ಸಂಜನಾಗೆ ಸಪ್ಲೈ ಮಾಡಿದ್ದಾನೆ ಎನ್ನಲಾಗಿದೆ.

ಹಾಗೆಯೇ ಪೊಲೀಸರಿಗೆ ಅನುಮಾನ ಬಾರಬಾರದೆಂದು‌ ಮನೆಯಲ್ಲೇ ವೇವ್ಹಿಂಗ್ ಮಷಿನ್ ಇಟ್ಟುಕೊಂಡು ಡ್ರಗ್ಸ್ ತೂಕ ಮಾಡಿ ಪ್ಯಾಕಿಂಗ್ ಮಾಡ್ತಿದ್ದ. ತದ ನಂತರ ತನ್ನ ನೆಟ್​ವರ್ಕ್ ಗ್ಯಾಂಗ್ ಮೂಲಕ ಪೂರೈಕೆ ಮಾಡ್ತಿದ್ದ. ಸದ್ಯ ಆರೋಪಿ ಬೆಂಗಳೂರು ಪೊಲೀಸರ ವಶದಲ್ಲಿದ್ದು, ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​ನಲ್ಲಿ ಲಾಕ್ ಆಗಿರುವ ಪೆಡ್ಲರ್​ಗಳ ಜೊತೆ ಲಿಂಕ್ ಹೊಂದಿರುವ ಕಾರಣ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.

ABOUT THE AUTHOR

...view details