ಕರ್ನಾಟಕ

karnataka

By

Published : Sep 28, 2020, 10:17 AM IST

ETV Bharat / state

ಸ್ಯಾಂಡಲ್​ವುಡ್​ಗೆ​ ಡ್ರಗ್ಸ್ ನಂಟು ಆರೋಪ ಪ್ರಕರಣ: ನೈಜೀರಿಯನ್ ಪೆಡ್ಲರ್​ಗಳಿಗೆ ಸಿಸಿಬಿ ಖೆಡ್ಡಾ

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿದೇಶಿ ಪ್ರದೇಶಗಳ ಕೈವಾಡ ಎದ್ದು ಕಾಣುತ್ತಿದೆ. ಈ ಹಿನ್ನೆಲೆ ಮತ್ತೆ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಲು ಸಿಸಿಬಿ ಖೆಡ್ಡಾ ತೋಡಿದೆ.

dcsd
ನೈಜೀರಿಯನ್ ಪೆಡ್ಲರ್​ಗಳಿಗೆ ಸಿಸಿಬಿ ಖೆಡ್ಡಾ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಮತ್ತೆ ಮೂವರು ವಿದೇಶಿ ಪೆಡ್ಲರ್​ಗಳು ಇದ್ದಾರೆ ಎಂಬ ಶಂಕೆಯನ್ನು ಸಿಸಿಬಿ ವ್ಯಕ್ತಪಡಿಸಿದೆ.

ಈಗಾಗಲೇ ಸಿನಿತಾರೆಯರಿಗೆ, ಉದ್ಯಮಿ ಹಾಗೂ ರಾಜಕಾರಣಿಗಳ ಮಕ್ಕಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಲೂಮ್‌‌ ಪೆಪ್ಪರ್, ಬೆನಾಲ್ಡ್, ಒಸೈ ಎಂಬ ಮೂವರು ಆರೋಪಿಗಳನ್ನು ಸಿಸಿಬಿ ಸೆರೆಹಿಡಿದಿದೆ. ನೈಜೀರಿಯನ್ ಪ್ರಜೆಗಳು ಟೂರಿಸ್ಟ್, ಸ್ಟೂಡೆಂಟ್ ವೀಸಾ ಮೂಲಕ ನಗರಕ್ಕೆ ಬಂದು ವಿದ್ಯಾಭ್ಯಾಸದ ಬಳಿಕ ಹಣದ ಆಸೆಗೆ ಡ್ರಗ್ಸ್​ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವೀಸಾ, ಪಾಸ್​ಪೋರ್ಟ್ ಅವಧಿ ಮುಗಿದಿದ್ರೂ ನಗರದಲ್ಲಿ ಇದ್ದಕೊಂಡು ಅಕ್ರಮ ಚಟುವಟಿಕೆ ನಡೆಸಿ ಮೋಜು ಮಸ್ತಿ ಮಾಡುತ್ತಿದ್ದಾರೆ.

ಲೂಮ್‌ ಪೆಪ್ಪರ್ ಹಾಗೂ ಬೆನಾಲ್ಡ್ ಉಡ್ಡೇನ ಜೊತೆ ಮೂವರು ನೈಜೀರಿಯನ್​ ಪ್ರಜೆಗಳು ಸೇರಿ ಹೈ ಎಂಡ್ ಪಾರ್ಟಿ, ರೇವ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂಬ ಆರೋಪವಿದೆ. ಇವರಿಗಾಗಿ ಸಿಸಿಬಿ ಕೊತ್ತನೂರು, ಹೆಣ್ಣೂರು, ಮಾದನಾಯಕನಹಳ್ಳಿ, ವಿದ್ಯಾರಣ್ಯಪುರ, ಟಿಸಿ ಪಾಳ್ಯ ಸೇರಿದಂತೆ ನಗರದಾದ್ಯಂತ ಹುಡುಕಾಟ ನಡೆಸುತ್ತಿದೆ. ಲೂಮ್ ಪೆಪ್ಪರ್​ಗೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಸಂಪರ್ಕ ಇತ್ತು ಎಂಬ ಆರೋಪವಿದೆ. ಮತ್ತೊಬ್ಬ ಆರೋಪಿ ಬೆನಾಲ್ಡ್ ಉಡ್ಡೇನ್​, ವೈಭವ್‌ ಜೈನ್, ವಿರೇನ್‌ ಖನ್ನಾ, ಆದಿತ್ಯಾ ಆಳ್ವರೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಇದೆ.

ABOUT THE AUTHOR

...view details