ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ತನಿಖೆಗೆ ಹಾಜರಾಗಿದ್ದ ನಟಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು,ಮತ್ತಷ್ಟು ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ.
ಚಂದನವನಕ್ಕೆ ಮಾದಕ ನಂಟು ಆರೋಪ: ನಟಿ ರಾಗಿಣಿ ಅರೆಸ್ಟ್
21:33 September 04
ಸಿಸಿಬಿ ವಶದಲ್ಲಿ ನಟಿ ರಾಗಿಣಿ
18:48 September 04
ನಟಿ ರಾಗಿಣಿ ಬಂಧನ
ತೀವ್ರ ವಿಚಾರಣೆ ಬಳಿಕ ಸಿಸಿಬಿಯಿಂದ ನಟಿ ರಾಗಿಣಿ ಬಂಧನ
ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್ಗೆ ನಟಿ ಹಾಜರ್
ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸುವ ಸಾಧ್ಯತೆ
17:16 September 04
ಮುಂದುವರೆದ ರಾಗಿಣಿ ವಿಚಾರಣೆ
- ಮುಂದುವರೆದ ನಟಿ ರಾಗಿಣಿ ವಿಚಾರಣೆ
- ಸಿಸಿಬಿ ಕಚೇರಿಗೆ ಆಗಮಿಸಿದ ಜಂಟಿ ಆಯುಕ್ತ ಸಂದೀಪ್ ಪಾಟೀಲ್
- ಮುಂಜಾನೆಯಿಂದ ಸಿಸಿಬಿ ವಿಚಾರಣೆಯಲ್ಲಿದ್ದ ರಾಗಿಣಿ
- ಮಧ್ಯಾಹ್ನದ ವೇಳೆಗೆ ಕಚೇರಿಯಿಂದ ನಿರ್ಗಮಿಸಿದ್ದ ಸಂದೀಪ್ ಪಾಟೀಲ್
- ಇದೀಗ ಮತ್ತೆ ಸಿಸಿಬಿ ಕಚೇರಿಗೆ ಆಗಮನ
16:48 September 04
ರಾಹುಲ್ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಸಿಸಿಬಿ
- ನಟಿ ಸಂಜನಾ ಆಪ್ತ ರಾಹುಲ್ ಬಂಧನ ಪ್ರಕರಣ
- ಸದ್ಯ ರಾಹುಲ್ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಸಿಸಿಬಿ ಪೊಲೀಸರು
- ಕೊರೊನಾ ಟೆಸ್ಟ್ ಕೂಡ ಮಾಡಲಾಗುವುದು
- ಬಳಿಕ ವಿಡಿಯೋ ಕಾನ್ಪರೆನ್ಸ್ ಮುಖಾಂತರ ನ್ಯಾಯಾಲಯ ಎದುರು ಆರೋಪಿಯನ್ನು ಹಾಜರುಪಡಿಸಲಾಗುವುದು
- ಉನ್ನತ ಮೂಲಗಳಿಂದ ಮಾಹಿತಿ
16:27 September 04
ರವಿಶಂಕರ್, ರಾಹುಲ್ ಬಂಧನ
- ಹಂತ ಹಂತವಾಗಿ ತನಿಖೆ ನಡೆಸುತ್ತಿದ್ದೇವೆ
- ನಾವು ಯಾವುದನ್ನೂ ಮರೆಮಾಡುವುದಿಲ್ಲ
- ಮುಕ್ತವಾಗಿ ಎಲ್ಲಾ ಮಾಹಿತಿ ನೀಡುತ್ತೇವೆ
- ರವಿಶಂಕರ್ ಹಾಗೂ ರಾಹುಲ್ರನ್ನು ಬಂಧಿಸಿದ್ದೇವೆ
- ಪಾರ್ಟಿಗಳಲ್ಲಿ ಇವರು ಡ್ರಗ್ಸ್ ಸೇವಿಸುತ್ತಿದ್ದರು ಎಂಬುದು ತಿಳಿದು ಬಂದಿದೆ
- ಕಮಲ್ ಪಂತ್ ಮಾಹಿತಿ
16:21 September 04
ರಾಗಿಣಿ ವಿರುದ್ಧ ಸುಮೊಟೋ ಕೇಸ್ ದಾಖಲು: ಕಮಲ್ ಪಂತ್
- ರಾಗಿಣಿ ವಿರುದ್ಧ ಸುಮೊಟೋ ಕೇಸ್ ದಾಖಲು
- ನಟಿಯರ ಆಪ್ತರಾದ ರವಿಶಂಕರ್ ಹಾಗೂ ರಾಹುಲ್ರನ್ನು ಬಂಧಿಸಿದ್ದೇವೆ
- ರಾಗಿಣಿ ಮನೆಯಲ್ಲಿ ಸಿಸಿಬಿ ದಾಳಿ ನಡೆಸಿದ ವೇಳೆ ಯಾವ ದಾಖಲೆಗಳು ಸಿಕ್ಕಿಲ್ಲ
- ವಿದೇಶಿ ಪ್ರಜೆಗಳ ಮೂಲಕ ಡ್ರಗ್ಸ್ ಸಂಗ್ರಹ
- ಇನ್ನೂ ತನಿಖೆ ನಡೆಯುತ್ತಿರುವುದರಿಂದ ಈಗಲೇ ಎಲ್ಲಾ ಮಾಹಿತಿಗಳನ್ನ ಹಂಚಿಕೊಳ್ಳಲು ಸಾಧ್ಯವಿಲ್ಲ
- ಸುದ್ದಿಗೋಷ್ಠಿಯಲ್ಲಿ ಕಮಲ್ ಪಂತ್ ಹೇಳಿಕೆ
16:17 September 04
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ರಿಂದ ಸುದ್ದಿಗೋಷ್ಠಿ ಆರಂಭ
- ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
14:55 September 04
ಪತ್ರಿಕಾಗೋಷ್ಠಿ ನಡೆಸಲಿರುವ ನಗರ ಪೊಲೀಸ್ ಆಯುಕ್ತ
- ಸ್ಯಾಂಡಲ್ವುಡ್ ಡ್ರಗ್ ನಂಟು ಆರೋಪ
- ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಲಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
- ನಟಿ ರಾಗಿಣಿಯ ಸಿಸಿಬಿ ವಿಚಾರಣೆ ಬಳಿಕ ಪತ್ರಿಕಾಗೋಷ್ಠಿ
14:17 September 04
ರಾಗಿಣಿಗೆ ಲಂಚ್ ಬ್ರೇಕ್
- ರಾಗಿಣಿಗೆ ಊಟಕ್ಕೆ ಸಮಾಯವಾಕಾಶ ಕೊಟ್ಟ ಅಧಿಕಾರಿಗಳು
- ಕೊಂಚ ರಿಲ್ಯಾಕ್ಸ್ ಮೂಡಲ್ಲಿ ನಟಿ
13:33 September 04
ಸಿಸಿಬಿ ಕಚೇರಿಯಿಂದ ಸಂದೀಪ್ ಪಾಟೀಲ್ ನಿರ್ಗಮನ
- ಸಿಸಿಬಿ ಕಚೇರಿಯಿಂದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನಿರ್ಗಮನ
- ಈ ವೇಳೆ ಡಿಸಿಪಿ ರವಿಕುಮಾರ್ ಪ್ರತಿಕ್ರಿಯೆ
- ಸದ್ಯ ವಿಚಾರಣೆ ನಡೆಯುತ್ತಿದೆ
- ರಾಗಿಣಿ ತನಿಖೆಗೆ ಸಹಕಾರ ನೀಡ್ತಿದ್ದಾರೆ
- ನಾಲ್ಕು ಗಂಟೆ ಸುಮಾರಿಗೆ ಸಂಪೂರ್ಣ ಮಾಹಿತಿ ಸಿಗುತ್ತೆ
- ಅಲ್ಲಿಯವರೆಗೆ ತನಿಖೆ ನಡೆಯುತ್ತೆ
- ತನಿಖೆಯಲ್ಲಿ ಏನು ಬೇಕಾದರೂ ನಡೆಯಬಹುದು
- ಡಿಸಿಪಿ ರವಿಕುಮಾರ್ ಹೇಳಿಕೆ
12:31 September 04
ರಾಗಿಣಿ ವಿಚಾರಣೆ ಆರಂಭ
- ಸಿಸಿಬಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ
- ನಟಿಯನ್ನ ಯಾವ ರೀತಿ ವಿಚಾರಣೆ ನಡೆಸಬೇಕು ಅನ್ನೋದರ ಕುರಿತು ಚರ್ಚೆ
- ಸಭೆ ಬಳಿಕ ವಿಚಾರಣೆ ಆರಂಭ
- ಈಗಾಗಲೇ ರಾಗಿಣಿ ಆಪ್ತ ರವಿಶಂಕರ್ ಬಳಿಯಿಂದ ಮಹತ್ತರ ವಿಚಾರಗಳನ್ನ ಕಲೆ ಹಾಕಿರುವ ಸಿಸಿಬಿ ಪೊಲೀಸರು
- ಆತನ ಹೇಳಿಕೆ ಮೆರೆಗೆ ನಟಿ ರಾಗಿಣಿಯ ವಿಚಾರಣೆ ನಡೆಯುತ್ತಿದೆ
11:55 September 04
ವಿಚಾರಣೆಗೆ ಹಾಜರಾದ ರಾಗಿಣಿ
- ಸಿಸಿಬಿ ಕಚೇರಿಗೆ ರಾಗಿಣಿಯನ್ನು ಕರೆತಂದ ಪೊಲೀಸರು
- ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ರಿಂದ
- ಈಗಾಗಲೇ ಸಿಸಿಬಿ ಕಚೇರಿಯಲ್ಲಿರುವ ಜಂಟಿ ಆಯುಕ್ತ ಸಂದೀಪ್ ಪಾಟೀಲ್
- ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ರಿಂದ ನಡೆಯಲಿರುವ ವಿಚಾರಣೆ
11:46 September 04
ಸೀರೆ ಉಟ್ಟು ವಿಚಾರಣೆಗೆ ಹಾಜರಾದ ರಾಗಿಣಿ
- ಪೊಲೀಸರ ಬೆಂಗಾವಲಿನೊಂದಿಗೆ ಸಿಸಿಬಿ ಕಚೇರಿಗೆ ರಾಗಿಣಿ ಆಗಮನ
- ಸಿಸಿಬಿ ಅಧಿಕಾರಿ ಅಂಜುಮಾಳರ ಜೊತೆ ರಾಗಿಣಿ ಎಂಟ್ರಿ
- ಸಿಸಿಬಿ ಕಚೇರಿ ಸುತ್ತ ಬಿಗಿ ಭದ್ರತೆ
- ಸೀರೆ ಉಟ್ಟು ವಿಚಾರಣೆಗೆ ಹಾಜರಾದ ರಾಗಿಣಿ
11:24 September 04
ಸಿಸಿಬಿ ಕಚೇರಿ ತಲುಪಿದ ನಟಿ
- ಸಿಸಿಬಿ ಕಚೇರಿ ತಲುಪಿದ ನಟಿ ರಾಗಿಣಿ
- ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ
10:36 September 04
ಸಿಸಿಬಿ ಕಚೇರಿಯತ್ತ ರಾಗಿಣಿ
- ನಟಿಯ ಮನೆಯಲ್ಲಿ ಶೋಧಕಾರ್ಯ ಮುಕ್ತಾಯ
- ಸಿಸಿಬಿ ಕಚೇರಿಗೆ ರಾಗಿಣಿಯನ್ನು ಕರೆದುಕೊಂಡು ಹೋಗುತ್ತಿರುವ ಅಧಿಕಾರಿಗಳು
10:09 September 04
ಸಿಸಿಬಿ ಕಚೇರಿಗೆ ರಾಗಿಣಿಯನ್ನು ಕರೆತರಲಿರುವ ಅಧಿಕಾರಿಗಳು
- ರಾಗಿಣಿ ಮನೆಯಲ್ಲಿ ಶೋಧಕಾರ್ಯ ಬಹುತೇಕ ಮುಕ್ತಾಯ
- ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಗೆ ನಟಿಯನ್ನು ಕರೆತರಲಿರುವ ಅಧಿಕಾರಿಗಳು
- ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಚನ್ನಣ್ಣನವರ್ ನೇತೃತ್ವದಲ್ಲಿ ನಡೆಯಲಿರುವ ವಿಚಾರಣೆ
10:05 September 04
ನಾಲ್ಕು ಮೊಬೈಲ್ಗಳು ವಶಕ್ಕೆ
- ರಾಗಿಣಿಯ ನಾಲ್ಕು ಮೊಬೈಲ್ಗಳನ್ನು ವಶಕ್ಕೆ ಪಡೆದ ಸಿಸಿಬಿ
- ಈ ಪೈಕಿ 2 ಮೊಬೈಲ್ನಲ್ಲಿರುವ ಬಹುತೇಕ ಮಾಹಿತಿಯನ್ನ ಡಿಲಿಟ್ ಆಗಿದೆ
- ಹೀಗಾಗಿ ಮಾಹಿತಿ ರಿಟ್ರೈವ್ಗಾಗಿ ಎಸ್ಎಫ್ಎಲ್ಗೆ ಮೊಬೈಲ್ ರವಾನೆ ಮಾಡಿದ ಸಿಸಿಬಿ ಅಧಿಕಾರಿಗಳು
09:48 September 04
ನಟಿ ರಾಗಿಣಿಗೆ ಸಿಸಿಬಿ ಬಿಸಿ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಮಹಿಳಾ ಅಧಿಕಾರಿ ಅಂಜುಮಾಳ ನೇತೃತ್ವದಲ್ಲಿ ಮುಂಜಾನೆಯಿಂದ ಪರಿಶೀಲನೆ ನಡೆಯುತ್ತಿದೆ. ತನಿಖಾ ದೃಷ್ಟಿಯಿಂದ ರಾಗಿಣಿ ಬಳಿಯಿದ್ದ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.