ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲದ ತನಿಖೆ ಚುರುಕುಗೊಂಡಿದ್ದು ಸಿಸಿಬಿ ಪೊಲೀಸರು ಕೆಲವರ ವಿಚಾರಣೆ ನಡೆಸಲು ಮುಂದಾಗಿದೆ. ಇನ್ನು ನಟ- ನಟಿಯರಿಗೆ ಡ್ರಗ್ಸ್ ನೀಡುತ್ತಿದ್ದ ಪೆಡ್ಲರ್ ಸಿಸಿಬಿ ವಶದಲ್ಲಿದ್ದಾನೆ.
ಸ್ಯಾಂಡಲ್ವುಡ್ ಡ್ರಗ್ಸ್ ಜಾಲ: ನಟಿಯರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಪೆಡ್ಲರ್ ಸಿಸಿಬಿ ವಶಕ್ಕೆ - ಡ್ರಗ್ ಪೆಡ್ಲರ್ ಕಾರ್ತಿಕ್ ರಾಜು
ರಾಗಿಣಿ ಆಪ್ತ ರವಿಶಂಕರ್ ನೀಡಿದ ಮಾಹಿತಿ ಆಧರಿಸಿ ಡ್ರಗ್ ಪೆಡ್ಲರ್ ರಾಜು ಅಲಿಯಾಸ್ ಕಾರ್ತಿಕ್ ರಾಜು ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದಿದೆ.
ನಟಿ ರಾಗಿಣಿ ಆಪ್ತ ರವಿಶಂಕರ್ ನೀಡಿದ ಮಾಹಿತಿ ಆಧರಿಸಿ ರಾಜು ಅಲಿಯಾಸ್ ಕಾರ್ತಿಕ್ ರಾಜು ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದಿದೆ. ರಾಗಿಣಿ ಆಪ್ತ ರವಿಶಂಕರ್ ಜೊತೆ ಕಾರ್ತಿಕ್ ರಾಜು ಈ ಹಿಂದೆ ಗುರುತಿಸಿಕೊಂಡಿದ್ದ. ನಗರದಲ್ಲಿ ನಡೆಯಿತ್ತಿದ್ದ ಹಲವಾರು ಪಬ್, ಹೋಟೆಲ್ ಪಾರ್ಟಿಯಲ್ಲಿ ನಟ ನಟಿಯರಿಗೆ ಈತ ಡ್ರಗ್ ಸಪ್ಲೈ ಮಾಡುತ್ತಿದ್ದನೆಂಬ ಆರೋಪ ಕೇಳಿ ಬಂದಿದೆ.
ಇನ್ನೊಂದೆಡೆ ಅಲೋಕ್ ಕುಮಾರ್ ಆರೆಸ್ಟ್ ಮಾಡಿದ್ದ ಪ್ರತೀಕ್ ಶೆಟ್ಟಿ, ಕಾರ್ತಿಕ್ ಆಪ್ತನಾಗಿದ್ದ. ಇಬ್ಬರು ಸೇರಿ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು. ಇನ್ನು ಇವರಿಬ್ಬರಿಗೆ ಚೆನ್ನೈನಿಂದ ಹೆಚ್ಚು ಗ್ರಾಹಕರಿದ್ದು, ಗಾಂಜಾ ಮಾರಾಟ ಮಾಡುವಾಗ ಪೊಲಿಸರ ಬಲೆಗೆ ಬಿದ್ದಿದ್ದರು. ಸದ್ಯ ಕಾರ್ತಿಕ್ ರಾಜ್, ರವಿಶಂಕರ್ ಹಾಗೂ ರಾಹುಲ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.