ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿಚಾರಣೆ ಬಹುತೇಕ ಮುಕ್ತಾಯವಾಗಿದ್ದು, ಖುದ್ದಾಗಿ ವಿಚಾರಣೆ ನಡೆಸಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸದ್ಯ ಮೂವರ ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದು, ಅದನ್ನು ಕಮೀಷನರ್ಗೆ ಸಲ್ಲಿಸಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣ: ಸದ್ಯದ ತನಿಖಾ ಪ್ರಗತಿ ಕಮಿಷನರ್ಗೆ ಸಲ್ಲಿಕೆ ಮಾಡಿದ ಸಂದೀಪ್ ಪಾಟೀಲ್ - Drug Mafia
ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರ ವಿಚಾರಣೆ ನಡೆಸಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಮೂವರು ಕೊಟ್ಟ ಮಾಹಿತಿಯನ್ನು ಕಮೀಷನರ್ಗೆ ಸಲ್ಲಿಸಿದ್ದಾರೆ.

ಸಂದೀಪ್ ಪಾಟೀಲ್
ಈವರೆಗಿನ ವಿಚಾರಣೆ ಹಾಗೂ ವಿಚಾರಣೆ ವೇಳೆ ಮೂವರು ಕೊಟ್ಟ ಹೇಳಿಕೆಗಳು ಮತ್ತು ಅವರ ಬಳಿ ಸಿಕ್ಕ ಎವಿಡೆನ್ಸ್ ಇದರ ಜೊತೆಗೆ ಪೊಲೀಸರು ಕಲೆ ಹಾಕಿದ್ದ ಡಿಜಿಟಲ್ ಮತ್ತು ಟೆಕ್ನಿಕಲ್ ಎವಿಡೆನ್ಸ್ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ನೀಡಿದ್ದಾರೆ.
ಬೆಳಗ್ಗೆ ಹತ್ತು ಗಂಟೆಯಿಂದ ಯುವರಾಜ್, ನಟ ಸಂತೋಷ್ ಕುಮಾರ್ ನಿರೂಪಕ ಅಕುಲ್ ಬಾಲಾಜಿ ವಿಚಾರಣೆ ಮಾಡಲಾಗಿತ್ತು. ಸದ್ಯ ಕಮಿಷನರ್ ಜೊತೆ ಚರ್ಚಿಸಿದ ಬಳಿಕ ಸಿಸಿಬಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.