ಕರ್ನಾಟಕ

karnataka

ETV Bharat / state

ಡ್ರಗ್ಸ್​ ಜೊತೆ ಹವಾಲಾ ನಂಟು: ರಾಗಿಣಿ ಆಪ್ತನ ಮೊಬೈಲ್​ ನೋಡಿ ಬೆಚ್ಚಿಬಿದ್ದ ಸಿಸಿಬಿ

ಡ್ರಗ್ಸ್​​ ಜಾಲ ನಂಟು ಹೊಂದಿರುವ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಮೊಬೈಲ್ ರಿಟ್ರೈವ್​ ಮಾಡಿರುವ ಸಿಸಿಬಿಗೆ ಶಾಕ್ ಕಾದಿತ್ತು. ಡ್ರಗ್ಸ್ ಡೀಲ್ ಸಂಬಂಧ ಇನ್ನಷ್ಟು ಪ್ರಮುಖ ಸಾಕ್ಷ್ಯಗಳು ವಾಟ್ಸಾಪ್​​​ನಲ್ಲಿ ಲಭ್ಯವಾಗಿದ್ದು, ಆತ ಹವಾಲಾ ದಂಧೆಯಲ್ಲಿಯೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

Ragini close friend Ravishanker
ರಾಗಿಣಿ ಆಪ್ತ ರವಿಶಂಕರ್

By

Published : Sep 22, 2020, 1:50 PM IST

ಬೆಂಗಳೂರು: ಸ್ಯಾಂಡಲ್​​​​​ವುಡ್​ಗೆ ಡ್ರಗ್ಸ್​ ಜಾಲ ನಂಟು ಆರೋಪ ಪ್ರಕರಣ ಸಂಬಂಧ ಸದ್ಯ ಬಂಧನವಾಗಿರೋ ಆರೋಪಿಗಳು ಕೇವಲ ಡ್ರಗ್ಸ್​ ಪೆಡ್ಲಿಂಗ್ ಮತ್ತು ಸೇವನೆ‌ ಅಷ್ಟೇ ಮಾಡುತ್ತಿರಲಿಲ್ಲ. ಇವರ ಜಾಲ ಕಂಡು ಸಿಸಿಬಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಆರೋಪಿ ರವಿಶಂಕರ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿ ಮೊಬೈಲ್ ರಿಟ್ರೈವ್​ ಮಾಡಿದಾಗ ಡ್ರಗ್ಸ್ ಜತೆ ಆತ ಹವಾಲಾ ದಂಧೆಯಲ್ಲೂ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. 5, 10 ರೂಪಾಯಿ ನೋಟುಗಳನ್ನು ಹವಾಲಾಗೆ ಬಳಸಿ, ಲಕ್ಷಕ್ಕೆ ಕೆ.ಜಿ ಅಂತ ಕೋಡ್ ವರ್ಡ್ ಬಳಸಿ ಶ್ರೀಲಂಕಾದಲ್ಲಿ ಲಕ್ಷ‌ ಲಕ್ಷ ಹಣ ಹೂಡಿಕೆ ‌ಮಾಡಿದ್ದಾನೆ. ಇನ್ನು ನೋಟಿನ ಫೋಟೋ ಮತ್ತು ನಂಬರ್​ಗಳನ್ನು ಶ್ರೀಲಂಕಾಗೆ ವಾಟ್ಸಾಪ್​​ ಮೂಲಕ ಕಳುಹಿಸಿರುವುದು ತಿಳಿದುಬಂದಿದೆ.

ರವಿಶಂಕರ್ ಮೊಬೈಲ್​ನಲ್ಲಿ ಸಿಕ್ಕಿವೆ ಎನ್ನಲಾದ ಫೋಟೋಗಳು

ಶ್ರೀಲಂಕಾದ ಕ್ಯಾಸಿನೋದಲ್ಲಿ ಹಲವಾರು ಮಂದಿ ಭಾಗಿಯಾಗಿ ಡ್ರಗ್ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಗೆ ಬರುವವರು ಹಣ ನೀಡಬೇಕು. ಹೀಗಾಗಿ ಯಾರಿಗೂ ಅನುಮಾನ ಬಾರದ ರೀತಿ 5, 10, 20 ರೂಪಾಯಿ ನೋಟಿನ ಮುಖಾಂತರ ಹವಾಲ ದಂಧೆ ಮಾಡಿರುವ ವಿಚಾರ ಬಯಲಾಗಿದೆ.

ರವಿಶಂಕರ್ ಮೊಬೈಲ್​ನಲ್ಲಿ ಸಿಕ್ಕಿವೆ ಎನ್ನಲಾದ ಫೋಟೋಗಳು

ಸದ್ಯ ಆರೋಪಿ ಕಳುಹಿಸಿರುವ ನೋಟಿನ ಚಿತ್ರಗಳ ಫೋಟೋಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. 5 ಅಂದರೆ 5ಲಕ್ಷ, 10 ಅಂದರೆ 10ಲಕ್ಷ, 20 ಅಂದರೆ 20 ಲಕ್ಷ ಎಂಬ ಕೋಡ್​​​​​ವರ್ಡ್​ ಇಟ್ಟುಕೊಂಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಈ ಕುರಿತು ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಹಾಗೆಯೇ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ರವಾನಿಸಿದ್ದಾರೆ.

ರವಿಶಂಕರ್ ಮೊಬೈಲ್​ನಲ್ಲಿ ಸಿಕ್ಕಿವೆ ಎನ್ನಲಾದ ಫೋಟೋಗಳು

ಹಾಗೆ ಬ್ಯಾಂಕಾಂಕ್​​​ ಅಂಡರ್ ವರ್ಲ್ಡ್ ಡಾನ್ ಸಂತೋಷ್ ಶೆಟ್ಟಿ ಜೊತೆಗೆ ಸಂಜನಾ ಆಪ್ತ ರಾಹುಲ್ ಲಿಂಕ್ ಹೊಂದಿರುವ ಫೋಟೋ ಕೂಡ ಲಭ್ಯವಾಗಿದೆ. ರಾಹುಲ್, ಡಾನ್ ಸಂತೋಷ್ ಶೆಟ್ಟಿ ಫೋಟೋ ಕೂಡ ರವಿಶಂಕರ್ ವಾಟ್ಸಾಪ್​​​ ಗ್ರೂಪ್​​​​ನಲ್ಲಿ ಚರ್ಚೆಯಾಗಿದ್ದು, ವಾಟ್ಸಾಪ್​​​ ಸಂದೇಶದ ಆಧಾರದ ಮೇರೆಗೆ ತನಿಖೆ ‌ನಡೆಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ‌.

ABOUT THE AUTHOR

...view details