ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಚಿನ್ನದ ವ್ಯಾಪಾರಿ ಮಗ 5ನೇ ಆರೋಪಿ ವೈಭವ್ ಜೈನ್ ತನಿಖೆ ಚುರುಕುಗೊಳ್ಳುತ್ತಿದೆ. ಈ ವೇಳೆ ಈತ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಕಾಟನ್ ಪೇಟೆ ಠಾಣೆಯಲ್ಲಿ ವೈಭವ್ ಜೈನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈತ ನಟಿ ರಾಗಿಣಿ ಆಪ್ತ ಎಂದು ತಿಳಿದು ಬಂದಿದೆ. ಈತನ ಬಂಧನದ ಬಳಿಕ ನಟ ಸಂತೋಷ್ ಕುಮಾರ್ ಹಾಗೂ ನಿರೂಪಕ ಅಕುಲ್ ಬಾಲಾಜಿ ಜೊತೆಗಿನ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸದ್ಯ ಪಾರ್ಟಿಯಲ್ಲಿ ಹೇಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ, ಪಾರ್ಟಿಗಳು ಎಲ್ಲೆಲ್ಲಾ ನಡೆಯುತಿತ್ತು, ಪಾರ್ಟಿ ಯಾರು ಆಯೋಜನೆ ಮಾಡುತ್ತಿದ್ದರು, ಪಾರ್ಟಿ ಯಾವ ರೆಸಾರ್ಟ್ನಲ್ಲಿ ನಡೆಯುತಿತ್ತು, ತಡರಾತ್ರಿ ಪಬ್ ಪಾರ್ಟಿಗಳಲ್ಲಿ ಯಾರೆಲ್ಲಾ ಭಾಗಿಯಾಗ್ತಿದ್ರು ಎಂಬೆಲ್ಲಾ ಮಾಹಿತಿಯನ್ನು ಈತ ನೀಡಿದ್ದಾನೆ ಎನ್ನಲಾಗಿದೆ.