ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​ಗೆ ಡ್ರಗ್ ಲಿಂಕ್ ಆರೋಪ: ರಿಕ್ಕಿ ಮೊಬೈಲ್​ ಎಫ್ಎಸ್​ಎಲ್​ಗೆ ರವಾನೆ - ಬೆಂಗಳೂರು ಸುದ್ದಿ

ಸ್ಯಾಂಡಲ್​ವುಡ್​ಗೆ ಡ್ರಗ್ ಲಿಂಕ್ ಆರೋಪ ಪ್ರಕರಣದಲ್ಲಿ ರಿಕ್ಕಿ ರೈ ಹೆಸರು ತಳುಕು‌ ಹಾಕಿಕೊಂಡಿದೆ. ಸದ್ಯ ರಿಕ್ಕಿ ಮೊಬೈಲ್ ಕಂಟೆಂಟ್ ರಿಟ್ರೀವ್​​ ​ ಮಾಡಲು ಎಫ್​ಎಸ್ಎಲ್​ಗೆ ಕಳುಹಿಸಲಾಗಿದೆ.

ರಿಕ್ಕಿ ಮೊಬೈಲ್ ವಶ
ರಿಕ್ಕಿ ಮೊಬೈಲ್ ವಶ

By

Published : Oct 9, 2020, 5:08 PM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ ಲಿಂಕ್ ಆರೋಪ ಪ್ರಕರಣದಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಹೆಸರು ತಳುಕು‌ ಹಾಕಿಕೊಂಡಿದ್ದು, ಎರಡು ದಿನಗಳ ವಿಚಾರಣೆಗೆ ಹಾಜರಾದ ರಿಕ್ಕಿ ರೈ ಇಂದು ಗೈರು ಹಾಜರಾಗಿದ್ದಾನೆ. ಸದ್ಯ ರಿಕ್ಕಿ ಡ್ರಗ್ ಪೆಡ್ಲಿಂಗ್ ಮಾಡುವವರ ಜೊತೆ ಲಿಂಕ್ ಹೊಂದಿದ್ದ ಆರೋಪದ ಮೇರೆಗೆ ಎರಡು ಮೊಬೈಲ್​ಗಳನ್ನು ಸಿಸಿಬಿ‌ ಪೊಲೀಸರು ಜಪ್ತಿ ಮಾಡಿದ್ದರು.

ಸದ್ಯ‌ ರಿಕ್ಕಿ ರೈ ಮೊಬೈಲ್ ಕಂಟೆಂಟ್ ರಿಟ್ರೀವ್​ ​ ಆಗಲು ಇನ್ನೂ ಮೂರ್ನಾಲ್ಕು ದಿನಗಳು ಬೇಕು. ಇತ್ತೀಚಿಗಷ್ಟೇ ರಿಕ್ಕಿ ಮನೆ ಮೇಲೆ ದಾಳಿ ನಡೆಸಿ, 2 ಮೊಬೈಲ್ ಸೀಜ್ ಮಾಡಲಾಗಿತ್ತು. ಆದರೆ ಡ್ರಗ್ ಮಾಫಿಯಾ ಬೆಳಕಿಗೆ ಬರ್ತಿದ್ದ ಹಾಗೆ‌ ಮೊಬೈಲ್​ಗಳಲ್ಲಿದ್ದ ಕೆಲ ಮಾಹಿತಿಯನ್ನು ಡಿಲೀಟ್ ಮಾಡಿರುವ ಶಂಕೆ ಸಿಸಿಬಿ ವ್ಯಕ್ತಪಡಿಸಿದೆ. ಸದ್ಯ ಆತನ ಚಾಟಿಂಗ್ ಬಗ್ಗೆ ಟೆಕ್ನಿಕಲ್ ಎವಿಡನ್ಸ್ ಕಲೆ ಹಾಕಲು ರಿಕ್ಕಿ ಮೊಬೈಲ್ ಎಫ್​ಎಸ್ಎಲ್​ಗೆ ಕಳುಹಿಸಿಲಾಗಿದೆ. ಆದರೆ, ಆತ ಮೆಸೇಜ್ ಡಿಲೀಟ್ ಮಾಡಿದ ಕಾರಣ ರಿಟ್ರೀವ್​​ ವಿಳಂಬವಾಗಲಿದೆ.

ಮೊಬೈಲ್ ರಿಟ್ರೀವ್​ ಮಾಡಿದರೆ ರಿಕ್ಕಿ ರೈ, ಆದಿತ್ಯಾ ಆಳ್ವಾ ಹಾಗೂ ಬಹುಭಾಷಾ ನಟಿ ಜೊತೆಗೆ ಇರುವ ಸಂಪರ್ಕದ ಮಾಹಿತಿ ಹೊರ ಬರಲಿದೆ. ಸದ್ಯ ಸಿಸಿಬಿ ಪೊಲೀಸರು ಕೂಡ ರಿಕ್ಕಿ ಮೊಬೈಲ್ ರಿಟ್ರೀವ್​ಗಾಗಿ ಕಾಯುತ್ತಿದ್ದು, ಡ್ರಗ್ ಪೆಡ್ಲಿಂಗ್ ಮಾಡಿದ್ದು ಪಕ್ಕಾ ಆದಲ್ಲಿ ಬಂಧನ ಖಚಿತವಾಗಿದೆ. ಅಷ್ಟೇ ಅಲ್ಲದೆ, ರಿಕ್ಕಿ‌ ಸಂಪರ್ಕದಲ್ಲಿರುವ ಕೆಲ ನಟಿ - ನಟರಿಗೆ ಸಂಕಷ್ಟ ಎದುರಾಗಲಿದೆ.

ABOUT THE AUTHOR

...view details