ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ ಪ್ರಕರಣ ಸಂಬಂಧ ಇಂದು ಪ್ರಕರಣದ ಆರೋಪಿಗಳ ಕುಟುಂಬಸ್ಥರನ್ನ ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ ಪ್ರಕರಣ:ಸಿಸಿಬಿಯಿಂದ ಆರೋಪಿಗಳ ಮನೆಕೆಲಸದವರು, ಕುಟುಂಬಸ್ಥರ ವಿಚಾರಣೆ - ccb enquired drug deal accueses family members
ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ ಪ್ರಕರಣದ ಆರೋಪಿಗಳಾದ ನಟಿ ಸಂಜನಾ, ನಟಿ ರಾಗಿಣಿ ದ್ವಿವೇದಿಯವರ ಮನೆಕೆಲಸದವರು, ಹಾಗೂ ಕುಟುಂಬಸ್ಥರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.
ಈಗಾಗಲೇ ಬಂಧಿತರದ ನಟಿ ಸಂಜನಾ ಮನೆಯ ಕೆಲಸಗಾರರನ್ನ ಬೆಳಗ್ಗೆಯಿಂದ ವಿಚಾರಣೆ ನಡೆಸುತ್ತಿದ್ದು, ಮನೆಗೆ ಯಾರೆಲ್ಲಾ ಬರ್ತಿದ್ರು, ಎಷ್ಟೊತ್ತಿಗೆ ಬರ್ತಿದ್ರು ಹೀಗೆ ಹತ್ತು ಹಲವು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಅಲ್ಲದೆ ನಟಿ ರಾಗಿಣಿ ಆಪ್ತ ರವಿಶಂಕರ್ ಪತ್ನಿಯನ್ನು ಕೂಡ ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ರವಿಶಂಕರ್ ನನ್ನ ಬಾಡಿ ವಾರೆಂಟ್ ಪಡೆದಿರೊ ಹಿನ್ನೆಲೆ ರವಿಶಂಕರ್ ಪತ್ನಿಗೆ ಈ ಹಿಂದೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ, ಯಾಕಂದ್ರೆ ರವಿಶಂಕರ್ ಮದುವೆಯಾದ ಕೆಲ ವರ್ಷಗಳ ನಂತರ ರಾಗಿಣಿ ಜೊತೆ ಬಹಳ ಆತ್ಮೀಯತೆಯಿಂದ ಇದ್ದ ಕಾರಣ ವಿಚ್ಚೇದನ ಪಡೆದು ದೂರವಾಗಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಸದ್ಯ ನಟಿ ರಾಗಿಣಿ ಜೊತೆಗಿದ್ದ ಸಂಬಂಧ ಹಾಗೂ ವ್ಯವಹಾರದ ಕುರಿತು ಸಿಸಿಬಿ ಅಧಿಕಾರಿಗಳು ಇವರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಹಾಗೆ ಬೆಳಿಗ್ಗೆಯೇ ಪ್ರಕರಣದ ಎ1 ಶಿವಪ್ರಕಾಶ್ ಪೋಷಕರನ್ನ ಕೂಡ ಕರೆದು ವಿಚಾರಣೆ ನಡೆಸಿ ಸಂಜೆ ವೇಳೆಗೆ ಬಿಟ್ಟು ಕಳುಹಿಸಿದ್ರು. ಇನ್ನು ಸಿಸಿಬಿ ಇವತ್ತು ಬಹುತೇಕ ಆರೋಪಿಗಳ ಕುಟುಂಬಸ್ಥರ ವಿಚಾರಣೆ ನಡೆಸಿ ಬಹಳಷ್ಟು ಆರೋಪಿಗಳ ಚಲನವಲನದ ಮಾಹಿತಿ ಕಲೆಹಾಕ್ತಿದ್ದಾರೆ.