ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಮೀನಾಕ್ಷಿ ಮಾಲ್ ಮಾಲೀಕ ವಿ.ಗಣೇಶ್ ರಾವ್ ಹಾಗೂ ಜೆಟ್ ಲಾಗ್ ಪಬ್ ಮಾಲೀಕರಾದ ಸೌಂದರ್ಯ ಹಾಗೂ ಜಗದೀಶ್ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಡ್ರಗ್ ಕೇಸ್: ಗಣೇಶ್ ರಾವ್, ಸೌಂದರ್ಯ, ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರು - ಸಿಸಿಬಿ ವಿಚಾರಣೆಗೆ ಹಾಜರಾದ ಸೌಂದರ್ಯ, ಜಗದೀಶ್
ಸ್ಯಾಂಡಲ್ವುಡ್ ಡ್ರಗ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ರಾಯಲ್ ಮೀನಾಕ್ಷಿ ಮಾಲ್ ಮಾಲೀಕ ವಿ.ಗಣೇಶ್ ರಾವ್ ಹಾಗೂ ಜೆಟ್ ಲಾಗ್ ಪಬ್ ಮಾಲೀಕರಾದ ಸೌಂದರ್ಯ ಹಾಗೂ ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

ಸ್ಯಾಂಡಲ್ವುಡ್ ಡ್ರಗ್ ಕೇಸ್
ನಿನ್ನೆಯಷ್ಟೇ ಸಿಸಿಬಿ ಈ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಮೂವರ ಒಡೆತನದ ಪಬ್ಗಳಲ್ಲಿ ಬಂಧಿತರು ಪಾರ್ಟಿಗಳನ್ನು ನಡೆಸಿರುವುದರ ಬಗ್ಗೆ ಸಿಸಿಬಿ ಮಾಹಿತಿ ಸಿಕ್ಕಿದೆ.
ವಿ.ಗಣೇಶ್ ರಾವ್, ಸೌಂದರ್ಯ, ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರು
ಗಣೇಶ್ ರಾವ್, ಸೌಂದರ್ಯ ಹಾಗೂ ಜಗದೀಶ್ರಿಂದ ಕೆಲ ಮಹತ್ವದ ಮಾಹಿತಿಗಳನ್ನು ಪಡೆದು ಸಾಕ್ಷಿಗಳನ್ನಾಗಿ ಪರಿಗಣಿಸುವ ಸಾಧ್ಯತೆಯಿದೆ. ಮೀನಾಕ್ಷಿ ಮಾಲ್ ಹಾಗೂ ಜೆಟ್ ಲಾಗ್ ಪಬ್ನಲ್ಲಿ ಬಂಧಿತ ನಟಿಯರಾದ ಸಂಜನಾ, ರಾಗಿಣಿ ಮತ್ತು ಸಹಚರರು ಹಲವಾರು ಪಾರ್ಟಿಗಳನ್ನ ನಡೆಸಿದ್ರು. ಪಾರ್ಟಿಯಲ್ಲಿ ಡ್ರಗ್ ಸಪ್ಲೈ ಆಗ್ತಿತ್ತಾ, ಯಾರೆಲ್ಲಾ ಬರ್ತಿದ್ರು ಅನ್ನೋದ್ರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಲಿದ್ದಾರೆ.