ಕರ್ನಾಟಕ

karnataka

ETV Bharat / state

ಸ್ಯಾಂಡಲ್​​ವುಡ್ ಡ್ರಗ್ಸ್​​ ಪ್ರಕರಣ: FIRನಲ್ಲಿ 12 ಮಂದಿಯ ಹೆಸರು! - ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ವಿರುದ್ಧ ಎಫ್​ಐಆರ್

A 1 to A 12 ಪ್ರಕರಣದ ಆರೋಪಿಗಳು ನಗರದ ಪ್ರತಿಷ್ಠಿತ ಹೋಟೆಲ್​​ನಲ್ಲಿ ಸೇರುತ್ತಿದ್ದರು. ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆ ಮುಂದುವರೆದಿದೆ.

Sandalwood drug case: FIR on 12
ಸ್ಯಾಂಡಲ್​​ವುಡ್ ಡ್ರಗ್ ಪ್ರಕರಣ: 12 ಮಂದಿ ವಿರುದ್ಧ FIR

By

Published : Sep 5, 2020, 1:45 PM IST

ಬೆಂಗಳೂರು: ಸ್ಯಾಂಡಲ್​ವುಡ್​​ನಲ್ಲಿ ಡ್ರಗ್ಸ್ ಬಳಕೆ​​ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಎಫ್​ಐಆರ್​ನಲ್ಲಿ ಉಲ್ಲೇಖಿತವಾದ 12 ಆರೋಪಿಗಳ ಹೆಸರು ಬಹಿರಂಗವಾಗಿದೆ.

ನಾರ್ಕೋಟಿಕ್​​ ವಿಂಗ್ ಎಸಿಪಿ ಗೌತಮ್ ನೀಡಿರುವ ದೂರಿನ ಸಾರಾಂಶ:

A 1 to A 12 ಪ್ರಕರಣದ ಆರೋಪಿಗಳು ನಗರದ ಪ್ರತಿಷ್ಠಿತ ಹೋಟೆಲ್​​ನಲ್ಲಿ ಸೇರುತ್ತಿದ್ದರು. ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಸಿನಿಮಾ ತಾರೆಯರು, ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಕೆಲವೊಮ್ಮೆ ಒಟ್ಟಿಗೆ ಸೇರಿ ಡ್ರಗ್ಸ್​​ ಪಾರ್ಟಿ ಮಾಡಿ, ಡ್ರಗ್ಸ್​​​ ಸೇವನೆ ಸಹ ಮಾಡಿದ್ದಾರೆ. ಸದ್ಯ ಈ ಆರೋಪಿಗಳು ಒಳಸಂಚು ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್​​ವುಡ್ ಡ್ರಗ್ಸ್​​ ಆರೋಪ ಪ್ರಕರಣ: 12 ಮಂದಿ ವಿರುದ್ಧ FIR

ಕಾಟನ್​​​ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಆರೋಪಿಗಳು:

A1: ಶಿವ ಪ್ರಕಾಶ್, ಚಿಪ್ಪಿ

A2: ರಾಗಿಣಿ ದ್ವಿವೇದಿ

A3: ವಿರೇನ್ ಖನ್ನಾ

A4: ಪ್ರಶಾಂತ್ ರಾಂಕಾ

A5: ವೈಭವ್ ಜೈನ್

A6: ಆದಿತ್ಯಾ ಆಳ್ವಾ

A7: ಲೂಮ್ ಪೆಪ್ಪರ್( ಡಕಾರ್) ಸೈಮನ್

A8: ಪ್ರಶಾಂತ್ ರಾಜು

A9: ಅಶ್ವಿನ್ ಅಲಿಯಾಸ್ ಬೂಗಿ

A10: ಅಭಿಸ್ವಾಮಿ

A11: ರಾಹುಲ್ ತೋನ್ಸೆ

A12: ರಾಗಿಣಿ ಆಪ್ತ ರವಿಶಂಕರ್ ಹೆಸರನ್ನು ಬಾಣಸವಾಡಿಯಿಂದ ಸಿಸಿಬಿಗೆ ವರ್ಗಾವಣೆಯಾದ ಮತ್ತೊಂದು ಎಫ್​ಐಆರ್​​​ನಲ್ಲಿ ಉಲ್ಲೆಖ ಮಾಡಿದ್ದಾರೆ.

ಮತ್ತೊಂದೆಡೆ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಡಕಾರ್ ದೇಶದ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್ ಬಂಧಿತ ಆರೋಪಿಯಾಗಿದ್ದು, ಈತ ಮೋಜು ಮಸ್ತಿ ಪಾರ್ಟಿಗಳಿಗೆ ವಿದೇಶದಿಂದ ಡ್ರಗ್ಸ್ ತರುತ್ತಿದ್ದ. ಸದ್ಯ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯಲಾಗಿದೆ. ಹಾಗೆಯೇ ಈತ ಸೆನೆಗಲ್ ದೇಶದ ರಾಜಧಾನಿಯಿಂದ ಡ್ರಗ್ಸ್​​ ತಂದು ನಟ ನಟಿಯರಿಗೆ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಆದಿತ್ಯಾ ಆಳ್ವಾ ಮಾಜಿ ಸಚಿವರ ಮಗನೆಂಬ ವಿಚಾರ ತನಿಖೆಯಲ್ಲಿ ಬಯಾಲಾಗಿದೆ.

ಸದ್ಯ ಈ 12 ಆರೋಪಿಗಳ ಜಾಲದ ಬಗ್ಗೆ ತನಿಖೆ ಮುಂದುವರೆದಿದೆ.

ABOUT THE AUTHOR

...view details