ಕರ್ನಾಟಕ

karnataka

ETV Bharat / state

ಸ್ಯಾಂಡಲ್​​​​​ವುಡ್ ಡ್ರಗ್ ಪ್ರಕರಣ: ನಟಿಮಣಿಯರಿಗೆ ಕಂಟಕವಾದ ಕ್ಲೌಡ್ - ಚಾಮರಾಜಪೇಟೆ ಬಳಿ ‌ಇರುವ ಸಿಸಿಬಿ ‌ಕಚೇರಿ

ನಟಿ ರಾಗಿಣಿ ತಾನು ಡ್ರಗ್ ಪೆಡ್ಲರ್​ಗಳ ಜೊತೆ ಚಾಟಿಂಗ್ ಮಾಡಿರೋದನ್ನ ಡಿಲಿಟ್ ಮಾಡಿದ್ದು, ಹಾಗೆ ವಿಚಾರಣೆಗೆ ಮೊದಲು ಕರೆದಾಗ ವಿಚಾರಣೆಗೆ ಅವಕಾಶವನ್ನ ಕೇಳಿ‌ದ್ದರು. ‌ತದ‌ನಂತರ ಸಿಸಿಬಿ‌ ರಾಗಿಣಿ ಮನೆ ಮೇಲೆ ದಾಳಿ‌ಮಾಡಿ ‌ಮೊಬೈಲ್ ಲ್ಯಾಪ್‌ಟಾಪ್ ಜಪ್ತಿ‌ ಮಾಡಿತ್ತು.

sandalwood-drug-case-cloud-for-the-actres-infarmation
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ, ನಟಿಮಣಿಯರಿಗೆ ಕಂಟಕವಾದ ಕ್ಲೌಡ್..

By

Published : Oct 18, 2020, 10:51 AM IST

ಬೆಂಗಳೂರು:ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣ ಸಂಬಂಧಿಸಿದಂತೆ ನಟಿಯೊಬ್ಬರ ಡ್ರಗ್ ಡೀಲ್ ಬಗ್ಗೆ ಕ್ಲೌಡ್ ನಿಂದ ಮಾಹಿತಿ ಪಡೆದು ಖೆಡ್ಡಾಕ್ಕೆ ಕೆಡವಿರುವ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಡ್ರಗ್ ಡೀಲ್ ಕೇಸ್ ಪ್ರಕರಣದಲ್ಲಿ ಮೊಬೈಲ್ ಫೋನ್​​​​​​ಗಳನ್ನ ಪ್ರಮುಖ ಸಾಕ್ಷ್ಯಗಳನ್ನಾಗಿ ಪರಿಗಣನೆ ಮಾಡಿ ಸಿಸಿಬಿ ಪರಿಶೀಲನೆ ಮಾಡಿತ್ತು. ಹೀಗಾಗಿ ಡ್ರಗ್ ನಲ್ಲಿ ಭಾಗಿಯಾದ ಆರೋಪಿಗಳನ್ನ ಚಾಮರಾಜಪೇಟೆ ಬಳಿ ‌ಇರುವ ಸಿಸಿಬಿ ‌ಕಚೇರಿಗೆ ಕರೆದು ಟೆಕ್ನಿಕಲ್ ಸೆಂಟರ್ ಮೊಬೈಲ್ ಗಳ ರಿಟ್ರೀವ್ ವರ್ಕ್​ಗಾಗಿ ಕಳುಹಿಸಲಾಗಿತ್ತು. ಆದರೆ, ನಟಿ ರಾಗಿಣಿ ಮೊಬೈಲ್, ಲ್ಯಾಪ್‌ಟಾಪ್ ನಲ್ಲಿ ಡ್ರಗ್ ಸಂಬಂಧದ ಎಲ್ಲ ಮಾಹಿತಿಯನ್ನ ಡಿಲೀಟ್ ಮಾಡಿದ್ದರು. ಆದರೆ, ನಟಿ ರಾಗಿಣಿಗೆ ಸೇರಿದ ಕೆಲವು ಚಾಟಿಂಗ್ ಕ್ಲೌಡ್ ನಲ್ಲಿ ಪತ್ತೆಯಾಗಿದೆ.

ಹೀಗಾಗಿ ಮೊಬೈಲ್ ರಿಟ್ರೀವ್ ಮಾಡಿದ ವೇಳೆ ಸುಲಭವಾಗಿ ಚಾಟಿಂಗ್ ಡೀಟೇಲ್ಸ್​​ ಪತ್ತೆಯಾಗಿದೆ. ಸದ್ಯ ಏನೋ ಮಾಡಲು ಹೋಗಿ ಮತ್ತೇನೊ ಆಯ್ತು ಅನ್ನೋ ಹಾಗೆ ನಟಿ ರಾಗಿಣಿ ಸ್ಥಿತಿಯಾಗಿದೆ. ನಟಿ ರಾಗಿಣಿ ತಾನು ಡ್ರಗ್ ಪೆಡ್ಲರ್​ಗಳ ಜೊತೆ ಚಾಟಿಂಗ್ ಮಾಡಿರೋದನ್ನ ಡಿಲೀಟ್ ಮಾಡಿದ್ದು, ಹಾಗೆ ವಿಚಾರಣೆಗೆ ಮೊದಲು ಕರೆದಾಗ ವಿಚಾರಣೆಗೆ ಅವಕಾಶವನ್ನ ಕೇಳಿ‌ದ್ದರು. ‌ತದ‌ನಂತರ ಸಿಸಿಬಿ‌ ರಾಗಿಣಿ ಮನೆಗೆ ದಾಳಿ‌ಮಾಡಿ ‌ಮೊಬೈಲ್ ಲ್ಯಾಪ್‌ಟಾಪ್ ಜಪ್ತಿ‌ ಮಾಡಿದ್ದರು.

ಆದರೆ ಸದ್ಯ ರಾಗಿಣಿಗೆ ಮೊಬೈಲ್ ಕ್ಲೌಡ್ ಕಂಟಕವಾಗಿ ಪರಿಣಮಿಸಿದೆ. ರಾಗಿಣಿ ಡ್ರಗ್ ಪೆಡ್ಲಿಂಗ್ ಮಾಡುವವರ ಜೊತೆ ವ್ಯವಹಾರ, ಪಾರ್ಟಿ‌ ಡಿಟೇಲ್ಸ್ ಪ್ರತಿಯೊಂದು ಸೇವ್ ಆಗಿದೆ.‌ ರಾಗಿಣಿಯಲ್ಲದೇ ಇತರ 8 ಜನ ಪೆಡ್ಲರ್​ಗಳ ಹಣೆಬರಹ ಕೂಡ ಇದೇ ರೀತಿಯಾಗಿ ಪತ್ತೆಯಾಗಿದೆ.

ABOUT THE AUTHOR

...view details