ಕರ್ನಾಟಕ

karnataka

ETV Bharat / state

ಡ್ರಗ್ಸ್​ ಪೆಡ್ಲಿಂಗ್​ನಲ್ಲಿ ಪ್ರಮುಖ ಪಾತ್ರ: ಸಂಜನಾ ಆಪ್ತ ಫಾಜಿಲ್​ ಬಂಧನಕ್ಕೆ ಸಿಸಿಬಿ ತಲಾಶ್​​ - ನಟಿ ಸಂಜನಾ ಆಪ್ತನಿಗೆ ಹುಡುಕಾಟ

ನಟಿ ಸಂಜನಾ ಗಲ್ರಾನಿ ಜೊತೆ ಆಪ್ತನಾಗಿ ಗುರುತಿಸಿಕೊಂಡಿದ್ದ ಎನ್ನಲಾದ ಡ್ರಗ್ಸ್​ ಪೆಡ್ಲರ್​ ಫಾಜಿಲ್ ಅಲಿಯಾಸ್ ಫಾಸಿಲ್​ಗಾಗಿ ಸಿಸಿಬಿ ಪೊಲೀಸರ ತಂಡ ಹುಡುಕಾಟ ನಡೆಸುತ್ತಿದೆ. ಈತ ಸಿಕ್ಕಿಬಿದ್ದರೆ ಆನೇಕರ ಹೆಸರುಗಳು ಬಯಲಾಗುವ ಸಾಧ್ಯತೆಯಿದೆ.

CCB search for Sanjana's close friend Fazil
ಸಂಜನಾ ಆಪ್ತ ಫಾಜಿಲ್​ಗೆ ಸಿಸಿಬಿ ಹುಡುಕಾಟ

By

Published : Sep 11, 2020, 9:39 AM IST

ಬೆಂಗಳೂರು:ಮಾದಕ ಲೋಕದಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಪೊಲೀಸರ ಕಣ್ಣಿಗೆ ಮಣ್ಣೆರೆಚಿದ್ದ ನಟಿಮಣಿಯರು ಹಾಗೂ ಅವರ ಗ್ಯಾಂಗ್ ಪೊಲೀಸರ ವಶದಲ್ಲಿದೆ. ಸದ್ಯ ಸಂಜನಾ ಗಲ್ರಾನಿ ಆಪ್ತ ಫಾಜಿಲ್ ಅಲಿಯಾಸ್ ಫಾಸಿಲ್​ಗಾಗಿ ಸಿಸಿಬಿ ಪೊಲೀಸರ ತಂಡ ತೀವ್ರ ಶೋಧ ನಡೆಸುತ್ತಿದೆ‌.

ಈತ ನಟಿ ಸಂಜನಾ ಗಲ್ರಾನಿ ಜೊತೆ ಆಪ್ತನಾಗಿ ಗುರುತಿಸಿಕೊಂಡಿದ್ದ ಹಾಗೂ ಹೈಫೈ ಡ್ರಗ್ಸ್​ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಷ್ಟು ಮಾತ್ರವಲ್ಲದೇ ಶ್ರೀಲಂಕಾ ಬಳಿಯ ಕೆಸಿನೊ ಹಾಗೂ ನಗರದಲ್ಲಿರುವ ಪ್ರತಿಷ್ಠಿತ ಪಬ್, ಬಾರ್​ಗಳಲ್ಲಿ ಡ್ರಗ್ಸ್​ ಪೂರೈಸಿ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಎನ್ನಲಾಗ್ತಿದೆ.

ಸದ್ಯ ಸಿಸಿಬಿಯ ಒಂದು ತಂಡ ಈತನಿಗಾಗಿ ಹುಡುಕಾಟ ಮುಂದುವರೆಸಿದೆ‌. ಹಾಗೆ ಸಂಜನಾ ಹಾಗೂ ಫಾಜಿಲ್ ಒಟ್ಟಿಗಿರುವ ಫೋಟೋ ಸಿಸಿಬಿ ಬಳಿ ಇದ್ದು, ಇದರ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ಸಂಜನಾ ಬಳಿ ಪ್ರಶ್ನಿಸಿದ್ದಾರೆ. ಆದ್ರೆ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ, ನಾನು ನಟಿಯಾದ ಕಾರಣ ಫಾಜಿಲ್ ನನ್ನ ಜೊತೆ ಪೋಟೋ ತೆಗೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಹೀಗಾಗಿ ಆರೋಪಿಯನ್ನ ಪತ್ತೆ ಹಚ್ಚಿ ಪೊಲೀಸರು ಸಂಜನಾ ಜೊತೆಗಿರುವ ನಂಟನ್ನ ಫಾಜಿಲ್ ಬಳಿಯಿಂದ ಪಡೆಯಲು ಮುಂದಾಗಿದ್ದಾರೆ.

ಸಂಜನಾ ಬಂಧನದ ಬಳಿಕ ಆಪ್ತ ಶೇಕ್ ಫಾಜಿಲ್​ನ ಜಯನಗರದ ಮನೆ ಮೇಲೆ ಸಿಸಿಬಿ ದಾಳಿ ಮಾಡಿದೆ. ಆ ಸಮಯದಲ್ಲಿ ಮನೆಯಲ್ಲಿ ಫಾಜಿಲ್ ಇರಲಿಲ್ಲ. ಹಾಗಾಗಿ ಆತನ ಪತ್ನಿ ಹಾಗೂ ಸಹೋದರನನ್ನ ವಿಚಾರಣೆ ನಡೆಸಿ ಆರೋಪಿ ಎಲ್ಲಿದ್ದರು ಮಾಹಿತಿ ನೀಡುವಂತೆ ತಿಳಿಸಿದ್ರು‌. ಈ ಫಾಜಿಲನು ರಾಜಕಾರಣಿಗಳು ಹಾಗೂ ಅವರ ಮಕ್ಕಳ ಜೊತೆ ಆತ್ಮೀಯನಾಗಿದ್ದಾನೆ. ಈತನನ್ನು ಬಂಧಿಸಿದರೆ ಬಾಲಿವುಡ್, ಸ್ಯಾಂಡಲ್​ವುಡ್​ನ ಇನ್ನಷ್ಟು ಕಲಾವಿದರ ಹೆಸರುಗಳು ಹೊರಬೀಳುವ ಸಾಧ್ಯತೆ ಇದೆ.

ಸಂಜನಾ ಆಪ್ತ ರಾಹುಲ್ ನಡೆಸುವ ಶ್ರೀಲಂಕಾದ ಕೊಲೊಂಬೊದಲ್ಲಿರುವ ಕೆಸಿನೊಗೆ ಫಾಜಿಲ್​ ಏಜೆಂಟ್ ಆಗಿದ್ದಾನೆ. ಫಾಜಿಲ್ ಸಿಕ್ಕಿಬಿದ್ರೆ ಸಂಜನಾಗೆ ಮತ್ತಷ್ಟು ಸಂಕಟ ಎದುರಾಗಲಿದೆ. ಯಾಕಂದ್ರೆ ಸಂಜನಾ ಫಾಜಿಲ್​ ಜೊತೆ ನಂಟು ಹೊಂದಿದ್ದಾರೆ ಎನ್ನಲಾಗ್ತಿದ್ದು, ಡ್ರಗ್ಸ್​ ಜಾಲದ ಬಗ್ಗೆ ಮಹತ್ತರ ಸಾಕ್ಷ್ಯಗಳು ದೊರೆಯುತ್ತವೆ.

ABOUT THE AUTHOR

...view details