ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಆರೋಪ ಕೇಳಿ ಬಂದಾಗ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾದಕ ದ್ರವ್ಯದ ಜಾಲ, ಬಂಧಿತ ನಟಿ ಸಂಜನಾ, ಶಾಸಕ ಜಮೀರ್ ಅಹ್ಮದ್ ಮತ್ತು ಫಿಲ್ಮ್ ಚೇಂಬರ್ನಲ್ಲಿರುವ ಕೆಲ ವ್ಯಕ್ತಿಗಳ ಮೇಲೆ ಮಾಧ್ಯಮದಲ್ಲಿ ಮಾತನಾಡುತ್ತಾ ಡ್ರಗ್ಸ್ ಜಾಲದ ಬಗ್ಗೆ ಆರೋಪಿಸಿದ್ರು.
ಸ್ಯಾಂಡಲ್ವುಡ್ ಡ್ರಗ್ಸ್ ಜಾಲ.. ಪ್ರಶಾಂತ್ ಸಂಬರಗಿಗೂ ಬಂತು ಸಿಸಿಬಿ ನೋಟಿಸ್! - ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ 2020,
ಸಂಬರಗಿ ಸಿಸಿಬಿ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಅನಿವಾರ್ಯವಾಗಿದೆ. ಡ್ರಗ್ಸ್ ಮಾಫಿಯಾ ಸಂಬಂಧ ಮಾಹಿತಿ ಇದೆ ಎನ್ನುತ್ತಿರುವ ಸಂಬರಗಿ ಇನ್ನಷ್ಟು ಮಾಹಿತಿ ನೀಡಿದ್ರೆ ಸಿಸಿಬಿ ಅಧಿಕಾರಿಗಳಿಗೆ ಮತ್ತಷ್ಟು ವಿಚಾರಣೆ ನಡೆಸಲು ಅನುಕೂಲಕರವಾಗಲಿದೆ..

ಪ್ರಶಾಂತ್ ಸಂಬರಗಿಗೆ ಸಿಸಿಬಿಯಿಂದ ನೋಟಿಸ್
ಈ ಹಿಂದೆ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ ನೋಟಿಸ್ ನೀಡಿದ ಹಾಗೆ, ಪ್ರಶಾಂತ್ ಸಂಬರಗಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ ಚಾಮಾರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಬಂದು ಮಾಹಿತಿ ನೀಡುವಂತೆ ನೋಟಿಸ್ನಲ್ಲಿ ಸೂಚನೆ ನೀಡಿದ್ದಾರೆ.
ಸಂಬರಗಿ ಸಿಸಿಬಿ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಅನಿವಾರ್ಯವಾಗಿದೆ. ಡ್ರಗ್ಸ್ ಮಾಫಿಯಾ ಸಂಬಂಧ ಮಾಹಿತಿ ಇದೆ ಎನ್ನುತ್ತಿರುವ ಸಂಬರಗಿ ಇನ್ನಷ್ಟು ಮಾಹಿತಿ ನೀಡಿದ್ರೆ ಸಿಸಿಬಿ ಅಧಿಕಾರಿಗಳಿಗೆ ಮತ್ತಷ್ಟು ವಿಚಾರಣೆ ನಡೆಸಲು ಅನುಕೂಲಕರವಾಗಲಿದೆ.