ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​ ಡ್ರಗ್ಸ್​ ನಂಟು ಆರೋಪ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ರಾಗಿಣಿ, ಸಂಜನಾ! - ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020,

ಕೊರೊನಾ ಇರುವ ಹಿನ್ನೆಲೆ ಸದ್ಯ ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳನ್ನ ವಿಡಿಯೋ ಕಾನ್ಪರೆನ್ಸ್ ಮೂಲಕ ವಸಂತನಗರ ಬಳಿ ಇರುವ ರಿಮೇಂಡ್ ಕೊರ್ಟ್​ಗೆ ಹಾಜರು ಪಡಿಸಲಾಯ್ತು. ಬಳಿಕ ನ್ಯಾಯಾಲಯ ರಾಗಿಣಿ ಮತ್ತು ಸಂಜನಾಳನ್ನು ಮತ್ತೆ ಸಿಸಿಬಿ ಕಸ್ಟಡಿಗೆ ನೀಡಿದೆ.

CCB custody to Sanjana and Ragini,  CCB custody to Sanjana and Ragini news, Sandalwood drug case, Sandalwood drug case 2020, Sandalwood drug case 2020 news, ಸಿಸಿಬಿ ಕಸ್ಟಡಿಗೆ ಸಂಜನಾ ಮತ್ತು ರಾಗಿಣಿ, ಸಿಸಿಬಿ ಕಸ್ಟಡಿಗೆ ಸಂಜನಾ ಮತ್ತು ರಾಗಿಣಿ ಸುದ್ದಿ,  ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020, ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ 2020 ಸುದ್ದಿ,
ಮತ್ತೆ ಸಿಸಿಬಿ ಕಸ್ಟಡಿಗೆ ರಾಗಿಣಿ, ಸಂಜನಾ

By

Published : Sep 11, 2020, 6:09 PM IST

Updated : Sep 11, 2020, 7:17 PM IST

ಬೆಂಗಳೂರು:ಸ್ಯಾಂಡಲ್​ವುಡ್​ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ ಅವರ ಆಪ್ತರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಪರೆನ್ಸ್ ಮುಖಾಂತರ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.

ಸಿಸಿಬಿ ಪೊಲೀಸ್ ತನಿಖಾಧಿಕಾರಿಗಳು ನ್ಯಾಯಾಲಯದ ಎದುರು ಹಾಜರಾಗಿದ್ದರು. ಈ ವೇಳೆ ಸಿಸಿಬಿ ಪರ ವಕೀಲರು ನಟಿ-ಮಣಿಯರ ವಿಚಾರಣೆ ಅವಶ್ಯಕತೆ ಇರುವ ಹಿನ್ನೆಲೆ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇಬ್ಬರು ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮಗೆ ಸರಿಯಾದ ಸಾಕ್ಷಿಗಳು ಸಿಕ್ಕಿದ್ರೂ ಕೂಡ ಇಬ್ಬರು ಸರಿಯಾಗಿ ಬಾಯ್ಬಿಡುತ್ತಿಲ್ಲ. ಹೀಗಾಗಿ ಮತ್ತೆ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿ, ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ತನಿಖಾ ಪ್ರಗತಿಯ ವರದಿಯನ್ನ ಸಲ್ಲಿಸಿದರು.

ಈ ವೇಳೆ ಇಬ್ಬರು ಆರೋಪಿಗಳ ಪರ ವಕೀಲರು ವಾದ ಮಾಡಿ ಯಾರದ್ದೋ ಹೇಳಿಕೆ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ನಟಿಯರನ್ನ ಬಂಧಿಸಿದ್ದಾರೆ. ಬೇರೆಯುವರ ಮಾತು ಕೇಳಿ ‌ಮನೆ ಮೇಲೆ ದಾಳಿ ‌ನಡೆಸಿ ಬಂಧಿಸಿದ್ದೀರಾ? ಇಬ್ಬರಿಂದಲೂ ಯಾವುದೇ ರೀತಿಯಾದ ಮಾದಕ ವಸ್ತು ಸಿಕ್ಕಿಲ್ಲ‌‌. ನಟಿ-ಮಣಿಯರನ್ನ ಮತ್ತೆ ಸಿಸಿಬಿ ಕಸ್ಟಡಿಗೆ ಕೊಡುವ ಅವಶ್ಯಕತೆ ಇಲ್ಲ. ನ್ಯಾಯಾಂಗ ಬಂಧನಕ್ಕೆ ಕೊಡುವ ಅವಶ್ಯಕತೆ ಇಲ್ಲವೆಂಬ ವಾದವನ್ನ ನಟಿಯರ ಪರ ವಕೀಲರು ವಾದ ಮಂಡಿಸಿದ್ದಾರೆ.

ನ್ಯಾಯಾಲಯ ಇಬ್ಬರ ವಾದ ಆಲಿಸಿ ನಟಿ ರಾಗಿಣಿ ಮತ್ತು ನಟಿ ಸಂಜನಾಳನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ. ಹೀಗಾಗಿ‌ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಇಬ್ಬರು ಮಣಿಯರು ಸಿಸಿಬಿ ಅಧಿಕಾರಿಗಳು ವಿಚಾರಣೆ ಎದುರಿಸಬೇಕಾಗುತ್ತದೆ.

ರಾಗಿಣಿ 8 ದಿವಸ ಕಸ್ಟಡಿ ಅಂತ್ಯ ಹಿನ್ನೆಲೆ ಸಿಸಿಬಿ ಪೊಲೀಸರು ಕೊರ್ಟ್ ಎದುರು ಹಾಜರು ಪಡಿಸಿದ್ದರು. ಸಂಜನಾ ಗಲ್ರಾನಿಯ ನಾಳಿಗೆ ಕಸ್ಟಡಿ ಅಂತ್ಯವಾಗುತ್ತೆ. ನಾಳೆ ಕೋರ್ಟ್ ರಜೆ ಇರುವ ಕಾರಣ ಇಂದು ಹಾಜರು ಪಡಿಸಿ ಮತ್ತೆ ವಶಕ್ಕೆ ಪಡೆದಿದ್ದಾರೆ.

Last Updated : Sep 11, 2020, 7:17 PM IST

ABOUT THE AUTHOR

...view details