ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಸಂಬಂಧ ಮೂರು ತಿಂಗಳು ಬಳಿಕ ನಟಿ ಸಂಜನಾ ಗಲ್ರಾನಿ ಅವರ ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಸಂಜನಾ ಹೊರ ಬರುತ್ತಿದ್ದಂತೆ ತಾಯಿ ರೇಷ್ಮಾ ಬರಮಾಡಿಕೊಂಡು ಹೊರ ನಡೆದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅನಾರೋಗ್ಯದ ಕಾರಣದಿಂದ ಜಾಮೀನಿಗೆ ಹೈಕೋರ್ಟ್ ಸಂಜನಾ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ನ್ಯಾಯಾಲಯ ಮೂರು ಲಕ್ಷದ ವೈಯಕ್ತಿಕ ಬಾಂಡ್ ಇಬ್ಬರು ಶ್ಯೂರಿಟಿ, ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕೆಂದು ಹೇಳಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.